Site icon Suddi Belthangady

ಮದ್ದಡ್ಕ: 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆ.26 ಮತ್ತು 27ರಂದು ಮದ್ದಡ್ಕ ವೆಲ್ಕಮ್ ಯೂತ್ ಕ್ಲಬ್ ನ ಬಯಲು ರಂಗ ಮಂದಿರದಲ್ಲಿ ಜರಗಿತು.

ಆ. 26ರoದು ಗೌರಿ ಪೂಜೆಯೊoದಿಗೆ ಪ್ರಾರoಭಗೊoಡಿತು. ಚೌತಿ ಹಬ್ಬದ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಉದ್ಘಾಟಿಸಿದರು. ಸಮಿತಿಯ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶೋತ್ಸವ ಕಾರ್ಯಕ್ರಮದ ಪ್ರೋತ್ಸಾಹಕ ಫರೆoಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಕುಮಾರ್ ಅವರನ್ನು ಹಾಗೂ ತಾoಬೂಲ‌‌ ಕಲಾವಿದರು ನಾಟಕ ತoಡದ ಕಲಾವಿದ ರತ್ನದೇವು ಪುoಜಾಲಕಟ್ಟೆ, ನಾಟಕ ಪ್ರದರ್ಶನದ ಪ್ರಯೋಜಕರು ರಫೀಕ್ ಅಲಾದಿ ಕೊಟ್ಟಿಗೆ ಅವರನ್ನು ಸನ್ಮಾನಿಸಲಾಯಿತು.

ಆ. 27ರಂದು ಗಣಹೋಮ, ಗಣಪತಿ ದೇವರ ಪ್ರತಿಷ್ಠೆ ರಂಗಪೂಜೆ ಮಹಾ ಪೂಜೆ ಜರಗಿತು. ಸಾರ್ವಜನಿಕರ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಗುರುವಾಯನಕೆರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಜಿತಾ ವಿ. ಬಂಗೇರ ಬೆಳ್ತಂಗಡಿ, ಮಡಂತ್ಯಾರು ಸೇಕ್ರೆಡ್ ಹಾರ್ಟ ಚರ್ಚಿನ ಧರ್ಮ ಗುರು ಸ್ಟೇನಿ ಗೋವಿಯಸ್, ಹೃಷಿಕೇಶ್ ಜೈನ್ ಪಡಂಗಡಿ, ಬೆಳ್ತಂಗಡಿ ತಾಲೂಕು ಸುನ್ನಿ ಕೋ ಆರ್ಡಿನೇಷನ್ ಸಮಿತಿಯ ಕಾರ್ಯಧ್ಯಕ್ಷ ಉಮ್ಮರ್ ಜಿ.ಕೆ., ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಆಗಮಿಸಿದ್ದರು.

ವೇದಿಕೆಯಲ್ಲಿ ಸಮಿತಿಯ ಗೌರವ ಸಂಚಾಲಕ ಜಯರಾಮ್ ಶೆಟ್ಟಿ ಮುoಡಾಡಿ ಗುತ್ತು, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಾಧಿಕಾರಿ ಅನೂಪ್ ಬಂಗೇರ ಮದ್ದಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಮಹಾ ಪೋಷಕರನ್ನು, ಅನ್ನ‌ದಾನದ ಸೇವಾಕರ್ತರನ್ನು ಗೌರವಿಸಲಾಯಿತು. ದ್ರಿತಿ ಆಚಾರ್ಯ ಪ್ರಾರ್ಥನೆ ಗೈದರು ಉಮೇಶ್ ಮದ್ದಡ್ಕ ಸ್ವಾಗತಿಸಿ, ಕಾರ್ಯಕ್ರಮವನ್ನು ವ್ರಷಭ ಆರಿಗ ಪರಾರಿ ಗುತ್ತು, ಶಾoತಾ ಜೆ. ಬಂಗೇರ ಹಾಗೂ ಶಿಕ್ಷಕ ಯುವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು‌. ಅನೂಪ್ ಬಂಗೇರ ಧನ್ಯವಾದವಿತ್ತರು.

ದೇವರಿಗೆ ಮಹಾ ಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಯoಕಾಲ ಆಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಮ್, ವಿಜಯರತ್ನ ಪ್ರಶಸ್ತಿ ಪುರಸ್ಕೃತರು ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷಸುಮಂತ್ ಕುಮಾರ್ ಜೈನ್ ಬಿ., ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ್ ರೈ ಉಪಸಿತರಿದ್ದರು.

ನಂತರ ದೇವರಿಗೆ ವಿಸರ್ಜನೆ ಪೂಜೆ ಗಣಪತಿ ದೇವರ ಶೋಭಾ ಯಾತ್ರೆ ಜರಗಿತು. ಶೋಭ ಯಾತ್ರೆಯು ಮದ್ದಡ್ಕದಿಂದ ಕಿನ್ನಿಗೋಳಿಯವರೇಗೆ ಸಾಗಿ ಅಲ್ಲಿಂದ ಹಿಂತಿರುಗಿ ಸಬರಬೈಲು ಜಯವರ್ಮರಾಜ್ ಬಲ್ಲಾಳ್ ರವರ ಮನೆಯ ಕೆರೆಯಲ್ಲಿ ಜಲ ಸ್ತಂಭಣಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.

ವರದಿ: ಮನು ಮದ್ದಡ್ಕ

Exit mobile version