Site icon Suddi Belthangady

ಸೆ.3: ಕಾಯರ್ತಡ್ಕದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭ- ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಸೆ.3ರಂದು ಬೆಳಿಗ್ಗೆ 10:30ಕ್ಕೆ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭಗೊಳ್ಳಲಿದೆ. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನ ಮಿತ್ರ ಉದ್ಘಾಟಿಸಲಿದ್ದಾರೆ. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಂ.ಆರ್‌.ಪಿ.ಎಲ್ ಚೀಫ್ ಜನರಲ್ ಮ್ಯಾನೇಜರ್ ಡಾ.ರುಡಾಲ್ಫ್ ನೊರೊನ್ಹಾ, ಕಳೆಂಜ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ವಿಶ್ವನಾಥ ಹೆಚ್. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹಾಗೂ ಕಾಯರ್ತಡ್ಕ ಕೊಂಗುಂಪುಯ ಕಾಂಪ್ಲೆಕ್ಸ್ ಉದ್ಯಮಿ ಕೆ.ಎಮ್. ಚಾಕೋ ಭಾಗವಹಿಸಲಿದ್ದಾರೆ ಎಂದು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಹಾಗೂ ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ ಆಡಳಿತ ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ವೈದ್ಯರ ತಪಾಸಣೆ ಮತ್ತು ಸೂಕ್ತ ಸಲಹೆ, ಉಚಿತ ಔಷಧಿ, ರಕ್ತದೊತ್ತಡ, ಹಿಮೋಗ್ಲೋಬಿನ್, ಮಧುಮೇಹ ತಪಾಸಣೆ, ಇಸಿಜಿ ಹಾಗೂ ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ ಕುರಿತು ಶಿಬಿರದಲ್ಲಿ ಮಾಹಿತಿ ಪಡೆಯಹುದು.

Exit mobile version