ಕೊಕ್ಕಡ: ಗಣೇಶ ಚತುರ್ಥಿ ದಿನದಂದು ರಾಜ್ಯದ ಸುಪ್ರಸಿದ್ಧ ಬಯಲು ಆಲಯ ಗಣಪತಿ ದೇಗುಲವಾದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಗಣಪತಿ ದೇವಾಲಯದಲ್ಲಿ ಸೇವಾ ರಶೀದಿಗಳಿಂದ ಒಟ್ಟು ರೂ. 16,62,947 ಹಣ ಸಂಗ್ರಹವಾಗಿದೆ ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮಾಹಿತಿ ನೀಡಿದ್ದಾರೆ.
ಅವಲಕ್ಕಿ ಪಂಚಕಜ್ಜಾಯದ ರಶೀದಿ ಸಂಖ್ಯೆಗಳು 11455, ಅಪ್ಪ ಪ್ರಸಾದ 11215, ಕಡ್ಲೆ ಪಂಚಕಜ್ಜಾಯ 3117, ಲಾಡು ಪ್ರಸಾಸದ 4635, ಮೋದಕ ಪ್ರಸಾದ 5004 ಮತ್ತು ಗಣಹೋಮ ವಿಶೇಷ ಸೇವೆಗೆಂದು 25 ರಶೀದಿಗಳನ್ನು ಮಾಡಲಾಗಿದೆ. ಚತುರ್ಥಿ ದಿನದಂದು ದೇಗುಲದಲ್ಲಿ ಅಂದಾಜು 8000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ.
ಗಂಟೆ ಗಣಪತಿ ಎಂದೇ ಸುಪ್ರಸಿದ್ಧಿಯಾಗಿರುವ ಸೌತಡ್ಕ ದೇವಸ್ಥಾನಕ್ಕೆ ನಿತ್ಯವೂ ಭಕ್ತಸಾಗರ ಹರಿದುಬರುತ್ತಿದ್ದು, ಚತುಥಿ ದಿನದಂದೂ ಬೇರೆ ಬೇರೆ ತಾಲೂಕು, ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು.