ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಪೂರ್ವಾಧ್ಯಕ್ಷ, ವಾಣಿ. ಪಿ.ಯು. ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥ, ಜೆಸಿಐ ವಲಯ ತರಬೇತುದಾರ ಜೆ.ಫ್.ಡಿ ಶಂಕರ್ ರಾವ್ ಬಿ. ಅವರಿಗೆ ಕಾರ್ಕಳದ ಬಾಲಜಿ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಈ ವರ್ಷದ ಜೆಸಿಐ ವಲಯದ ತರಬೇತಿ ಸಮ್ಮೇಳನದಲ್ಲಿ ತರಬೇತುದಾರನಾಗಿ ಜೇಸಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಅತೀ ಹೆಚ್ಚು ತರಬೇತಿ ನೀಡಿರುವುದನ್ನು ಪರಿಗಣಿಸಿ ಜೆಸಿಐ ವಲಯ 15 ರಿಂದ ಕೊಡಲ್ಪಡುವ ಪ್ರೇರಣಾ ಪುರಸ್ಕಾರ-2025 ನೀಡಿ ಗೌರವಿಸಲಾಯಿತು.
ಈ ಪುರಸ್ಕಾರವನ್ನು ವಲಯಾಧ್ಯಕ್ಷ ಜೆಸಿ ಅಭಿಲಾಷ್ ಬಿ.ಎ. ಅವರು ನೀಡಿ ಗೌರವಿಸಿದರು. ತರಬೇತಿ ವಿಭಾಗದ ನಿರ್ದೇಶಕಿ ಜೆಸಿ ಅಕ್ಷತಾ ಶೆಟ್ಟಿ, ಪ್ರಾಂತ್ಯ ಡಿ ವಲಯ ಉಪಾಧ್ಯಕ್ಷ ರಂಜಿತ್ ಎಚ್.ಡಿ., ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ವಲಯದ ಇತರ ಗಣ್ಯರು ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.