ಬೆಳ್ತಂಗಡಿ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಸಾನ್ವಿ ಅಶ್ವಥಪಲ್ಕೆ ಇವರು ಶೇಕಡಾ 97.5 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಸಂಗೀತ ಶಿಕ್ಷಕಿ ಶ್ಯಾಮಲ ನಾಗರಾಜ್ ಕುಕ್ಕಿಲ ಮತ್ತೂರು ಇವರ ಶಿಷ್ಯೆಯಾಗಿದ್ದಾರೆ. ವಾಣಿ ಇಂಗ್ಲೀಷ್ ಮೀಡಿಯಂ ಶಾಲೆ ಬೆಳ್ತಂಗಡಿಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು ಮೋಹನ್ ಬಂಗೇರ ಮತ್ತು ಸೌಮ್ಯ ಕೆ. ಅಶ್ವಥಪಲ್ಕೆ ಕಡಂಬು ಇವರ ಪುತ್ರಿ.