Site icon Suddi Belthangady

ಕನ್ಯಾಡಿ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕನ್ಯಾಡಿ: ಜಯನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ಸಾಮಾನ್ಯ ಸಭೆಯು ಆ.26ರಂದು ಕನ್ಯಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ ಗೌಡ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ದ.ಕ. ಹಾಲು ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಪದ ನಿಮಿತ್ತ ನಿರ್ದೇಶಕ ಸಂದೀಪ್ ಜೈನ್ ಮಾತನಾಡಿ ಒಕ್ಕೂಟದಲ್ಲಿ ದೊರೆಯುವ ಸಹಾಯ ಧನ ಬಗ್ಗೆ ಮಾಹಿತಿ ನೀಡಿ, ಪಶುಗಳ ಲಾಲಾಣೆ ಪೋಷಣೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸವಿತಾ, ನಿರ್ದೇಶಕಿ ವಸಂತಿ ಕಾರಿಜೆ, ರತ್ನಾವತಿ ಮಾಳಿಗೆ ಮನೆ, ಸುನಂದ, ಪ್ರೇಮಾ, ಜಲಜ ಮಾಳಿಗೆ ಮನೆ, ಲತಾ, ದೇವಕಿ, ಗೀತಾ ಕೇರಿಮಾರು, ಗೀತಾ ವಿ.ನಾಯ್ಕ, ಮಲ್ಲಿಕಾ, ಕಮಲ, ಸದಸ್ಯರು ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.

ಮುಖ್ಯ ಕಾರ್ಯನಿರ್ವಾಹಕಿ ಬಿ.ರೇವತಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ನಿರ್ದೇಶಕಿ ಮಲ್ಲಿಕಾ ವಂದಿಸಿದರು.

ಸಂಘಕ್ಕೆ ಹಾಲು ನೀಡುವ ಹಿರಿಯ ಸದಸ್ಯರಾದ ಚಂದ್ರಾವತಿ ಶೆಟ್ಟಿ, ದೇವಕಿ ಶೆಟ್ಟಿ, ಸುಗುಣೆಶ್ ಭಟ್ ಗೌರವಿಸಲಾಯಿತು. ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರುಗಳಾದ ಹರ್ಷಿತಾ ರಾಣಿ, ಸುಂದರಿ ವಿ. ಲಿಜಿ ಅವರನ್ನು ಉಡುಗೊರೆ ನೀಡಿ ಗೌರವಿಸಲಾಯಿತು. 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ನಿರಂತರ ಹಾಲು ಪೂರೈಸಿದ ಸದಸ್ಯರಿಗೆ ಉಡುಗೊರೆ ನೀಡಿ ಗೌರವಿಲಾಯಿತು.

ಅಧ್ಯಕ್ಷೆ ಸೌಮ್ಯಲತಾ ಜಯಂತ್ ಗೌಡ ಅವರು ಸಾಧ್ಯವಾದಷ್ಟು ಎಲ್ಲ ಸದಸ್ಯರು ಸಂಘದ ಅಭಿವೃದ್ಧಿಗೆ ಸಹಕಾರ ಅಗತ್ಯವಿದೆ. ವಿಸ್ತರಣೆ ಅಧಿಕಾರಿ ಸವಿಸ್ತಾರವಾದ ಮಾಹಿತಿ ಕೊಟ್ಟಿದ್ದಾರೆ. ಸದಸ್ಯರು ಸಾಧ್ಯವಾದಷ್ಟು ಹಾಲು ನೀಡಿ ಸಹಕರಿಸಬೇಕು. ಶಾಸಕರು ರೂ. 2ಲಕ್ಷ ಅನುದಾನ ಬಂದಿರುತ್ತದೆ. ಸಂಘಕ್ಕೆ ನೂತನ ನೀರಿನ ಟ್ಯಾಂಕ್ ನಿರ್ಮಿಸಲಾಗುವುದು. ಸಂಘದ ಕಟ್ಟಡದ ಎದುರು ಶೀಟ್ ಅಳವಡಿಸಲಾಗುವುದು. ದೂರದಿಂದ ಹಾಲು ಸರಬರಾಜು ಮಾಡುವ ಉದ್ದೇಶದಿಂದ ಎಲೆಟ್ರಿಕ್ ವಾಹನ ಖರೀದಿಸಿ ಮಾಡಿ ಸಂಘಕ್ಕೆ ಸಂಗ್ರಹ ಮಾಡುವ ಯೋಜನೆ. ಪಶು ಆಹಾರ ಮನೆ ಮನೆಗೆ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Exit mobile version