Site icon Suddi Belthangady

ಕರಾಟೆ ಸ್ಪರ್ಧೆಯಲ್ಲಿ ಬೇಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೇಂದ್ರಾಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿಯವರ ಆಶ್ರಯದಲ್ಲಿ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ 14ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ ಸುಹೈಲ್ ಮತ್ತು ಸಿಂಚನ ಜೇಮ್ಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಮೊಹಮ್ಮದ್ ಶಾಜಿಲ್, ಪ್ರಜ್ವಲ್ ಲಾರೆನ್ಸ್ ಮತ್ತು ಶ್ರೀಯ ಎಂ.ಎಸ್. ದ್ವಿತೀಯ ಸ್ಥಾನ ಹಾಗು ಏಂಜಲ್ ಮೇರಿ ಜೋಸೆಫ್ ತೃತೀಯ ಸ್ಥಾನ ಪಡೆದಿರುತ್ತಾರೆ.

Exit mobile version