Site icon Suddi Belthangady

ಕೊಯ್ಯೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

ಕೊಯ್ಯೂರು: “ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಹಾಗೂ ದುಶ್ಚಟ ಗಳಿಂದ ಪ್ರಭಾವಿತರಾ ಗದಂತೆ ಪೋಷಕರು ಮತ್ತು ಶಿಕ್ಷಕರು ಗಮನ ಹರಿಸಬೇಕು ” ಎಂದು ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ರಾಮಚಂದ್ರ ದೊಡ್ಡಮನಿ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷ ತೆಯನ್ನು ಪ್ರಾಂಶುಪಾಲ ಮೋಹನ ಗೌಡ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಗತಿ ಪತ್ರ ವಿತರಿಸಿ ಸಲಹೆ -ಸೂಚನೆ ಗಳನ್ನು ನೀಡಲಾಯಿತು. ವಿದ್ಯಾರ್ಥಿನಿಯರಾದ ವಿನಯ, ಐಶ್ವರ್ಯ, ಚಿರಸ್ವಿ, ಸಹಲಾ, ವಿದ್ಯಾ ಪ್ರಾರ್ಥನೆ ಗೈದರು. ಕನ್ನಡ ಉಪನ್ಯಾಸಕಿ ರಶ್ಮಿದೇವಿ ಸ್ವಾಗತಿಸಿ, ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಣೆ ಗೈದರು. ಉಪನ್ಯಾಸಕರು ಗಳಾದ ಸಂತೋಷ್ ಕುಮಾರ್, ಮಾಯಿಲ, ಪವಿತ್ರ, ತೃಪ್ತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಭವ್ಯ ಎಂ. ವಂದಿಸಿದರು.

Exit mobile version