Site icon Suddi Belthangady

ಕಳೆಂಜ: ಕೊಕ್ಕಡ ಜೆಸಿಐ ಕಪಿಲಾ ಘಟಕದಿಂದ ಪಿ.ಟಿ.ಸಬಾಸ್ಟಿಯನ್ ರಿಗೆ ಸನ್ಮಾನ

ಕಳೆಂಜ: ಕೊಕ್ಕಡ ಜೇಸಿಐ ಕಪಿಲಾ ಘಟಕದಿಂದ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಜೇಸಿ ಸೆಬಾಸ್ಟಿಯನ್ ಪಿ.ಟಿ. ಅವರಿಗೆ “ಕಪಿಲಾಶ್ರೀ 2025” ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸೆಬಾಸ್ಟಿಯನ್ ಪಿ.ಟಿ ರವರು ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿಡ್ಲೆ ಗ್ರಾಮ ಪಂಚಾಯತ್‌ನ ಸದಸ್ಯರಾಗಿ, ನಿಡ್ಲೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ, ಕ್ರಿಶ್ಚಿಯನ್ ಬ್ರದರ್ಸ್‌ ಕಳೆಂಜ ಸಂಘದ ಅಧ್ಯಕ್ಷರಾಗಿ, ಓಣಂ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಜೇಸಿಐನ ಉಪಾಧ್ಯಕ್ಷರಾಗಿ ಹಲವಾರು ಕಾರ್ಯಕ್ರಮದ ನಿರ್ದೇಶಕರಾಗಿ, ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ, ಪ್ರಸ್ತುತ ತಾಲೂಕು ಮಟ್ಟದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

Exit mobile version