ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಆ.23ರಂದು ನಡೆದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಸಂತ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮೆರೆದಿದ್ದಾರೆ. ಆರು ತಂಡಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿವೆ.
ಫಲಿತಾಂಶ: 17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ – ಸಂತ ತೆರೇಸಾ ಕನ್ನಡ ಮಾಧ್ಯಮ ಶಾಲೆ ಪ್ರಥಮ, ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ, 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ, 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸಂತ ತೆರೇಸಾ ಕನ್ನಡ ಮಾಧ್ಯಮ ಶಾಲೆ ಪ್ರಥಮ ಸ್ಥಾನ, 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ – ಸಂತ ತೆರೇಸಾ ಕನ್ನಡ ಮಾಧ್ಯಮ ಶಾಲೆ ಪ್ರಥಮ, ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ಪ್ರಶಸ್ತಿಗಳು:
ಧನುಷ್ ಕೆ., ಗ್ರೀಷ್ಮಾ – ಬೆಸ್ಟ್ ಆಲ್ ರೌಂಡರ್, ಮಹಮದ್ ತಮೀಮ್ – ಬೆಸ್ಟ್ ಗೋಲ್ ಕೀಪರ್, ಆಯುಷ ತುಲ್ ಮುಫಿದಾ, ಆಸ್ಟಿನ್ – ಬೆಸ್ಟ್ ಶೂಟರ್, ಭಕ್ತಿ (ಆಂಗ್ಲ ಮಾಧ್ಯಮ), ಭರತ್ (ಕನ್ನಡ ಮಾಧ್ಯಮ) – ಬೆಸ್ಟ್ ಗೋಲ್ ಕೀಪರ್, ಮಾನಸ (ಆಂಗ್ಲ ಮಾಧ್ಯಮ), ಮಹಮದ್ ಝಹೀಮ್ (ಕನ್ನಡ ಮಾಧ್ಯಮ) – ಬೆಸ್ಟ್ ಆಲ್ ರೌಂಡರ್, ದೀಕ್ಷಿತ್ ಬೆಸ್ಟ್ ಶೂಟರ್ ( ಆಂಗ್ಲ ಮಾಧ್ಯಮ)
ದೈಹಿಕ ಶಿಕ್ಷಣ ಶಿಕ್ಷಕರಾದ ವಿನ್ಸೆಂಟ್ ಸಿಕ್ವೇರಾ ಹಾಗೂ ಸಿರಾಜ್ ಅವರು ಸಹಕರಿಸಿದ್ದಾರೆ. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಲೀನಾ ಡಿಸೋಜಾ, ಪಿಯು ಕಾಲೇಜು ಪ್ರಾಂಶುಪಾಲೆ ಭಗಿನಿ ಮೋಲಿ ಡಿಕುನ್ನ, ಸಂಚಾಲಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.