Site icon Suddi Belthangady

ದೊಂಡೋಲೆ: ಸಹೋದರಿಯ‌ ಗಂಡನಿಂದ‌ ಹಲ್ಲೆ, ಜೀವ ಬೆದರಿಕೆ‌: ದೂರು ದಾಖಲು

ಧರ್ಮಸ್ಥಳ: ಗ್ರಾಮದ ದೊಂಡೋಲೆಯಲ್ಲಿರುವ ಮನೆಗೆ ವಾಣಿಯವರು ಹೋಗಿದ್ದಾಗ ಸಹೋದರಿಯ ಗಂಡ ಹಲ್ಲೆ‌ ನಡೆಸಿ ಜೀವ‌‌ ಬೆದರಿಕೆ ಹಾಕಿದ್ದಾರೆ ಎಂದು ಈ ಕುರಿತು ಸೂಕ್ತ ಕಾನೂನು‌ ಕ್ರಮ ಕೈಗೊಳ್ಳಬೇಕೆಂದು ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಆ.14ರಂದು ದೂರು‌ ನೀಡಿರುವ ಘಟನೆ‌ ವರದಿಯಾಗಿದೆ.

ದೂರಿನಲ್ಲಿ ಏನಿದೆ?: ವಾಣಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ “ನಾನು ಆ.10ರಂದು ನನ್ನ ಗಂಡ ಹಾಗೂ ಮಗಳೊಂದಿಗೆ ಅಕ್ಕ ಪ್ರವೀಣ ಕುಮಾರಿ ಎಂಬುವರ ಮನೆಗೆ ಬಂದಿದ್ದು ಆಲ್ಲಿಂದ ಆ.13ರಂದು ರಂದು ನನ್ನ ತಂದೆ ತಾಯಿಯ ಫೋಟೋಗೆ ಕೈ ಮುಗಿದು ಬರುವ ಎಂದು ಸಂಜೆ ಮಗಳು ಧೃತಿ ಹಾಗೂ ಅಕ್ಕ ಪ್ರವೀಣ ಕುಮಾರಿ ಜೊತೆಯಾಗಿ ನಡೆದುಕೊಂಡು ತಾಯಿಯ ಮನೆಯಾದ ದೊಂಡೋಲೆಗೆ ಹೋಗಿದ್ದಾಗ ಮನೆಯ ಹಾಲ್ ಗೆ ಪ್ರವೇಶಿಸುತ್ತಿದ್ದಂತೆ ನನ್ನ ತಂಗಿಯ ಗಂಡ ಮನೋಹರ್ ಎಂಬವರು ನನ್ನನ್ನು ನೋಡಿ ನೀವು ಯಾಕೆ ಬಂದದು ನಿಮಗೆ ಇಲ್ಲೇನು ಕೆಲಸ ನಡೆಯಿರಿ ಹೊರಗೆ ಎಂದು ಹೇಳಿ ನನ್ನ ಕೆನ್ನೆಗೆ ಹೊಡೆದರು.‌ ಆಗ ನಾನು ಇದು ನಮ್ಮ ಅಪ್ಪ ಅಮ್ಮ ನ ಮನೆ ನಾವು ಯಾಕೆ ಬರಬಾರದು ಎಂದು ಕೇಳಿದಾಗ, ಮನೋಹರನು ಅಲ್ಲೇ ಇದ್ದ ಕತ್ತಿಯನ್ನು ಎತ್ತಿಕೊಂಡು ನನ್ನನ್ನು ಹಾಗೂ ಅಕ್ಕ ಪ್ರವೀಣ ಕುಮಾರಿಯನ್ನು ಉದ್ದೇಶಿಸಿ ನಿಮ್ಮಿಬ್ಬರನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀದ ಬೆದರಿಕೆ ಒಡ್ಡಿರುತ್ತಾರೆ. ನಾವು ಆಲ್ಲಿಂದ ಹೋಗದೆ ಇದ್ದಾಗ ನನ್ನ ತಲೆಯನ್ನು ಹಿಡಿದು ಗೋಡೆಗೆ ಬಡಿದಿದ್ದಾರೆ. ಅಕ್ಕನನ್ನು ದೂಡಿದ್ದಾರೆ. ಆದರೂ ನಾವು ಹೊರಗೆ ಹೋಗದೇ ಇದ್ದಾಗ ಸಿಟೌಟ್ ನಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ನನಗೆ ಸೊಂಟದಿಂದ ಕೆಳಗೆ ಹೊಡೆದನು. ನಂತರ ನಾನು ನೋವು ತಾಳಲಾರದೆ ಬೊಬ್ಬೆ ಹೊಡೆದು ಅಲ್ಲಿಂದ ಹೊರಗೆ ಬಂದೆನು. ಆಗ ಪ್ರವೀಣ ಕುಮಾರಿಗೂ ಹೊಡೆದಿದ್ದಾರೆ. ಬಳಿಕ ನಾನು ಹಾಗೂ ಪ್ರವೀಣಕುಮಾರಿ ಮಂಜುನಾಥ ಎಂಬುವರ ಕಾರಿನಲ್ಲಿ, ಚಿಕಿತ್ಸೆ ಬಗ್ಗೆ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ, ವೆನ್ಲಾಕ್ ಸರಕಾರಿ 108 ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕಳಿಸಿಕೊಟ್ಟು ನಂತರ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ನಮಗೆ ಕೆಟ್ಟ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವ ಮನೋಹರ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿರುವುದಾಗಿ ತಿಳಿದು ಬಂದಿದೆ.

Exit mobile version