ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮಾಡಲಾದ ಅಪಪ್ರಚಾರ ಖಂಡಿಸಿ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಎಸ್‌ಐಟಿಗೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಉನ್ನತಾಧಿಕಾರಿಗಳಿಗೆ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷಗಳಷ್ಟು ಇತಿಹಾಸವಿರುವ ಕರ್ನಾಟಕದ ಪವಿತ್ರ ಧಾರ್ಮಿಕ ಕ್ಷೇತ್ರ ನಾಡಿನ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಇಲ್ಲಿ ಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಆಣತಿಯಂತೆ ಅನ್ನದಾನ, ಔಷಧ ದಾನ, ವಿದ್ಯಾದಾನ ಮತ್ತು ಅಭಯ ದಾನಗಳೆಂಬ ಚತುರ್ವಿಧ ದಾನ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ.
ಜನಮಾನಸದಲ್ಲಿ ಶ್ರೀಕ್ಷೇತ್ರ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪಡೆದಿರುವ ಗೌರವಾದರಗಳಿಂದ ಅಸೂಯೆಗೊಳಗಾಗಿರುವ ಕೆಲವೊಂದು ವ್ಯಕ್ತಿಗಳು ಮತ್ತು ಶಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಇತ್ತೀಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಭಕ್ತಾದಿಗಳ ಮನಸಿನಲ್ಲಿ ಗೊಂದಲ ಸೃಷ್ಟಿಸುವ ಕಾನೂನು ಬಾಹಿರ ಮತ್ತು ಅನ್ಯಾಯದ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ‘ಹೆಣ್ಣು ಮಗಳೊಬ್ಬಳ ದುರಂತ ಸಾವಿಗೆ ನ್ಯಾಯ ಕೇಳುವುದು’ ಎಂಬ ಹೆಸರಿನಲ್ಲಿ ಆರಂಭವಾದ ಈ ಹೋರಾಟ ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ವ್ಯವಸ್ಥಿತ ಅಪಪ್ರಚಾರ ಮಾಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕಿಂತ ಹೆಚ್ಚಾಗಿ ಕಳೆದ ಕೆಲ ತಿಂಗಳುಗಳಿಂದ ಸ್ಥಾಪಿತ ಹಿತಾಸಕ್ತಿಗಳೊಂದಗೂಡಿದ ದುಷ್ಟಕೂಟವೊಂದು ಇದೇ ದುರುದ್ದೇಶದ ಈಡೇರಿಕೆಗಾಗಿ ಅತ್ಯಂತ ಘೋರ ಮತ್ತು ಪೇಯ ಷಡ್ಯಂತ್ರವೊಂದನ್ನು ಹೆಣೆದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಆಡಳಿತ ವ್ಯವಸ್ಥೆಯ ಕುರಿತಾಗಿ ಸುಳ್ಳು ಸುದ್ದಿಗಳನ್ನೇ ಹರಡಿ, ಎಲ್ಲರ ಮನದಲ್ಲಿ ಅಪನಂಬಿಕೆಯ ಬೀಜ ಬತ್ತುತ್ತಿದೆ.
ಒಂದರ ಹಿಂದೆ ಒಂದು ಅನ್ನುಹಲವು ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ, ಕ್ಷೇತ್ರದಲ್ಲಿ ಅಪಾರ ಸಾವು ನೋವುಗಳಾಗಿವೆ’ ಎನ್ನುವ ನಿರಾಧಾರ ಸುದ್ದಿಗಳನ್ನು ಅಖ ತಂತ್ರಜ್ಞಾನ ಬಳಸಿ ವೈಭವೀಕರಿಸಿ, ಅವುಗಳನ್ನು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುತ್ತಾ, ಕ್ಷೇತ್ರದ ಭತ್ತರ ಮನಸುಗಳನ್ನು ಘಾಸಿಗೊಳಿಸಲಾಗುತ್ತಿದೆ. ಶ್ರೀಕ್ಷೇತ್ರದಿಂದ ನಡೆಯುವ ಅದೆಷ್ಟೋ ಜನಪರ, ಸಾಮಾಜಿಕ ಸದುದ್ದೇಶದ ‘ಕಾರ್ಯಕ್ರಮಗಳ ಬಗ್ಗೆಯೂ ಸುಳ್ಳು ಮಾಹಿತಿ ಪಸರಿಸಿ, ಜನರ ಮನಸ್ಸಿನಲ್ಲಿ ಅಪನಂಬಿಕೆ ಮೂಡಿಸುವ ಈ ಹುನ್ನಾರ ಸಮಾಜದ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಜೊತೆಗೆ ಸಮಾಜದ ವಿವಿಧ ವಿಭಾಗಗೊಳಗೆ ಕಂದಕವನ್ನು ಸೃಷ್ಟಿಸುತ್ತಾ, ಸಾಮಾಜಿಕ ಶಾಂತಿಯನ್ನು ದೊಡ್ಡ ಮಟ್ಟದಲ್ಲಿ ಕಲುಷಿತಗೊಳಿಸುವ ಯತ್ನಗಳೂ ನಡೆಯುತ್ತಿರುವುದು ಈಗಾಗಲೇ ತಮ್ಮ ಗಮನಕ್ಕೂ ವೇದ್ಯವಾದ ವಿಷಯವೇ ಆಗಿರುತ್ತದೆ. ಇದಕ್ಕೂ ಮಿಗಿಲಾಗಿ, ಅವರ ಕುಕೃತ್ಯಗಳನ್ನು ಆಕ್ಷೇಪಿಸುವ/ವಿರೋಧಿಸುವವರ ವಿರುದ್ಧ ಅತ್ಯಂತ ಕೀಳ ಹುಟ್ಟಿದ ಸುಳ್ಳು ಪ್ರಚಾರದ ಮೂಲಕ ಅಂತಹವರ ಚಾರಿಪ್ರದನನ ಮಾಡುವ ವ್ಯವಸ್ಥಿತ ಮತ್ತೆ ನಡೆಯುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಧರ್ಮಸ್ಥಳದ ಬಗ್ಗೆ ನಡೆದಿರುವ ಈ ಪಡ್ಯಂತ್ರವನ್ನು ಈಗಾಗಲೇ ಸರ್ಕಾರ ಗಮನಿಸಿ, ಅದು ಪರಿಹರಿಸುವ ನಿಟ್ಟಿನಲ್ಲಿ ಹಲವು ಮಟ್ಟದ ತನಿಖೆ, ವಿಶೇಷ ತನಿಖಾದಳ ರಚನೆಯಂತಹ ಉಪಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ.
ಷಡ್ಯಂತ್ರದ ಕಾರಣದಿಂದಾಗಿ ಈಗಾಗಲೇ ಕರ್ನಾಟಕ ಸರ್ಕಾರವು ಜನತೆಯ ತೆರಿಗೆಯ ಹಣದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯರ್ಥವಾಗಿ ಖರ್ಚು ಮಾಡಬೇಕಾಗಿ ಬಂದಿರುತ್ತದೆ ಮತ್ತು ಆಡಳಿತ ವ್ಯವಸ್ಥೆಯ ಮೇಲೆ ಅನಗತ್ಯ ಹೊರೆ ಹೊರಿಸಬೇಕಾಗಿ ಬಂದಿರುತ್ತದೆ. ಯಾರದೋ ಸ್ವಾರ್ಥ ಸಾಧನೆಗಾಗಿ ಮತ್ತು ದುರುದ್ದೇಶದ ಈಡೇರಿಕೆಗಾಗಿ ಸರ್ಕಾರದ ಹಣವನ್ನು ಅನಗತ್ಯವಾಗಿ ಪೋಲು ಮಾಡಬೇಕಾಗಿ ಬಂದಿರುವುದು ಅತ್ಯಂತ ದುರಂತದ ಸಂಗತಿ.
ಕ್ಷೇತ್ರದ ಬಗೆಗಿನ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕುರಿತಾದ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಿ, ಆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಅಲ್ಲದೇ ತಮ್ಮ ತನಿಖಾದಳ ನಡೆಸುತ್ತಿರುವ ತನಿಖೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ತಿಗೊಳಿಸಿ, ಸಮಾಜಘಾತುಕ ಶಕ್ತಿಗಳು ಹೂಡಿರುವ ಷಡ್ಯಂತ್ರದ ಎಲ್ಲಾ ಎಲ್ಲಾ ವಿವರಗಳನ್ನೂ ತಮ್ಮ ತನಿಖೆಯ ಮೂಲಕ ಹೊರಗೆಳೆದು ಜನತೆ ಮುಂದಿಡಬೇಕಾಗಿಯೂ, ಅಂತಹ ಕುಕೃತ್ಯಗಳಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮತ್ತು ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶ್ರೀಕ್ಷೇತ್ರದ ಪಾವಿತ್ರತೆ ಮತ್ತು ಘನತೆಗಳಿಗೆ ಯಾವುದೇ ಚ್ಯುತಿ ಬರದಂತೆ ಮಾಡಬೇಕಾಗಿಯೂ, ಜೊತೆಗೆ ಶ್ರೀ ಡಿ. ವೀರೇಂದ್ರ ಹೆಗಡೆಯವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ವಿನಾಕಾರಣ ಹಾನಿಯಾಗದಂತೆಯೂ ನೋಡಿಕೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ, ಎಲಕಿಂತ ಹೆಚ್ಚಾಗಿ ಮೇಲೆ ಹೇಳಿದ ಪಡಂತದ ಪರಿಣಾಮವಾಗಿ ಸಮಾಜದಲ್ಲಿ ಉಂಟಾಗಿರುವ ಗೊಂದಲಗಳು, ಅಸಹಿಷ್ಣುತೆ ಮತ್ತು ಅಶಾಂತಿಯನ್ನು ನಿವಾರಿಸಬೇಕಾಗಿಯೂ ತಾಲೂಕಿನ ಶಾಂತಿಪ್ರಿಯ ಮತ್ತು ಜವಾಬ್ದಾರಿಯುತ ಬನತೆಯ ಪರವಾಗಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ.
ಅದರ ಜೊತೆಗೆ ಮೇಲೆ ಹೇಳಿದ ಷಡ್ಯಂತ್ರದ ಪರಿಣಾಮವಾಗಿ ಸರ್ಕಾರವು ಆನಗತ್ಯವಾಗಿ ವೆಡ್ಡ ಮಾಡಬೇಕಾಗಿ ಬಂದ ಎಲ್ಲಾ ಮೊತ್ತಗಳನ್ನೂ ಈ ಪಡ್ಯಂತ್ರಕ್ಕೆ ಭಾಗಿಗಳಾದವರಿಂದ ವಸೂಲಿ ಮಾಡುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಮನವಿ ಸಲ್ಲಿಸುವ ವೇಳೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ವಸಂತ ಸಾಲ್ಯಾನ್, ಗಂಡಿಬಾಗಿಲಿನ ಸಿಯೋನ್ ಆಶ್ರಮ ಟ್ರಸ್ಟ್‌ನ ಟ್ರಸ್ಟಿ ಯು.ಸಿ. ಪೌಲೋಸ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ನಡಕರ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜನಜಾಗೃತಿಯ ಮಾಜಿ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಹಿರಿಯ ವಕೀಲ ಧನಂಜಯ ರಾವ್, ಮುಂಡಾಜೆಯ ವೆಂಕಟರಮಣ ಹೆಬ್ಬಾರ್, ಜನಜಾಗೃತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬಿಜೆಪಿ ಮಾಜಿ ಅಧ್ಯಕ್ಷೆ ಶಾರದಾ ರೈ, ಲಕ್ಷ್ಮಿ ಗ್ರೂಪ್‌ನ ಮೋಹನ್ ಉಜಿರೆ, ಅಳದಂಗಡಿ ಸತ್ಯದೇವತೆ ದೇವಸ್ಥಾನದ ಆಡಳಿತ ಮೊಕೇಸರ ಶಿವಪ್ರಸಾದ ಅಜಿಲ, ಉಜಿರೆಯ ಲಕ್ಷ್ಮಣ ಸಪಲ್ಯ, ಆರ್‌ಎಸ್ಎಸ್ ಮುಖಂಡ ಸಂತೋಷ್ ಕಾಪಿನಡ್ಕ, ಕಕ್ಕಿಂಜೆ ಜನಜಾಗೃತಿ ಮಾಜಿ ಅಧ್ಯಕ್ಷ ರಹೀಂ ಕಕ್ಕಿಂಜೆ, ವಕೀಲ ಸುಬ್ರಹ್ಮಣ್ಯ ಆಗರ್ತ, ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ನಿರ್ದೇಶಕರಾದ ವೆಂಕಟರಮಣ ಭಟ್ ಮತ್ತು ಸೀತಾರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ ಆಜಿ, ಅಳದಂಗಡಿ ಸೊಸೈಟಿ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಪಡೋಡಿ, ಮೇಲಂತಬೆಟ್ಟು ಭಗವತಿ ಕ್ಷೇತ್ರದ ಧರ್ಮದರ್ಶಿ ಯೋಗೀಶ್, ಉದ್ಯಮಿ ವಸಂತ ಭಟ್ ನಾರಾವಿ, ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.