ಧರ್ಮಸ್ಥಳ: ಧರ್ಮಸ್ಥಳದ ಆನಂದ ಭವನ ಹೊಟೇಲ್ ಮಾಲಕ ದಿವಂಗತ ಜನಾರ್ಧನ ಅವರ ಕಿರಿಯ ಪುತ್ರ, ಬೆಂಗಳೂರು ಮತ್ತು ಪೂನಾದಲ್ಲಿ ರಾಗಾ ಪ್ರಿಸಿಸನ್ ಅನ್ನುವ ಪ್ರತಿಷ್ಠಿತ ಕಂಪೆನಿಯ ಮಾಲಕ ಪ್ರಸನ್ನ ಭಟ್ (54ವ) ಆ.24ರಂದು ಪೂನಾದಲ್ಲಿ ಹೃದಯಾಘಾತದಿಂದಾಗಿ ವಿಧಿವಶರಾಗಿದ್ದಾರೆ. ಎನ್. ಟಿ. ಟಿ. ಎಫ್. ಟೂಲ್ ಮೇಕರ್ ನಲ್ಲಿ ಪರಿಣಿತರಾಗಿದ್ದ ಪಸನ್ನ ಭಟ್ ರವರು ಬೆಂಗಳೂರು ಮತ್ತು ಪೂನಾದಲ್ಲಿ ರಾಗಾ ಪ್ರಿಸಿಸನ್ ಕಂಪೆನಿಯನ್ನು ಹುಟ್ಟುಹಾಕಿ, ನಡೆಸಿಕೊಂಡು ಬರುತ್ತಿದ್ದರು.
ಬೆಂಗಳೂರಿನಲ್ಲಿ ನೆಲೆಸಿರುವ ಪ್ರಸನ್ನ ಭಟ್ ರವರು ಕಾರ್ಯನಿಮಿತ್ತ ಪೂನಾದಲ್ಲಿರುವ ತನ್ನ ಸಂಸ್ಥೆಗೆ ಆ.24ರಂದು ತೆರಳಿದ್ದಾಗ ಹೃದಯಾಘಾತವಾಗಿರುವುದಾಗಿ ತಿಳಿದುಬಂದಿದೆ. ಇವರ ಪಾರ್ಥೀವ ಶರೀರದ ಅಂತ್ಯಸಂಸ್ಥಾರ ನಾಳೆ ಧರ್ಮಸ್ಥಳದ ಕೂಟದಕಲ್ಲಿನಲ್ಲಿರುವ ಅವರ ಮನೆಯಲ್ಲಿ ನಡೆಯಲಿದೆ. ಮೃತರು ತಾಯಿ ವಸಂತಿ, ಪತ್ನಿಆಶಾ, ಮಕ್ಕಳಾದ ಶೃತಿಪ್ರಿಯ, ಶುಚಾ, ಸಹೋದರ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ರವಿಕುಮಾರ್, ಸಹೋದರಿ ಜಯಲಕ್ಷ್ಮೀ ಅವರನ್ನು ಅಗಲಿದ್ದಾರೆ.