Site icon Suddi Belthangady

ಮುಂಡಾಜೆ: ಕೃಷಿ ಪತ್ತಿನ ಸಹಕಾರ ಸಂಘದ ಚಾರ್ಮಾಡಿ ಶಾಖೆ ಉದ್ಘಾಟನೆ ಸಮಾರಂಭ

ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚಾರ್ಮಾಡಿ ಶಾಖೆಯ ಉದ್ಘಾಟನೆ ಸಮಾರಂಭ ಆ.25 ರಂದು ಚಾರ್ಮಾಡಿ ಶಾಖಾ ಕಟ್ಟಡದ ಸಮೀಪದ ಪಂಚಶ್ರೀ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಮಾಡಿದರು. ಅಧ್ಯಕ್ಷತೆಯನ್ನು ಮುಂಡಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ನಾರಾಯಣ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶಾರದಾ, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಮೂಲ್ಯ, ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಡಳಿತ ಮೊಕ್ತೇಸರಾದ ಪ್ರಕಾಶ್ ಹೊಸಮಠ, ಚಾರ್ಮಾಡಿಯ ಹಿರಿಯ ಸದಸ್ಯ ಅನಂತ ರಾವ್, ಕಾಂತಪ್ಪ ಗೌಡ ಅಡಿಮಾರು, ಮುಂಡಾಜೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ, ನಿರ್ದೇಶಕರಾದ ಎಂ.ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಶಿವಪ್ರಸಾದ್ ಗೌಡ ದೇವಸ್ಯ, ರವಿ ಪೂಜಾರಿ, ಅಜಯ್ ಕೆ.ಎ, ಅಶ್ವಿನಿ ಎ. ಹೆಬ್ಬಾರ್, ಸುಮಾ ಎಂ. ಗೋಖಲೆ, ಮೋಹಿನಿ, ನಾರಾಯಣ ಪಡ್ಕೆ, ಬಾಬು ಗೌಡ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ವೆಂಕಟೇಶ್ವರ ಭಟ್ ಕಜೆ ಸ್ವಾಗತಿಸಿ, ನಿರ್ದೇಶಕ ಚೆನ್ನಕೇಶವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Exit mobile version