ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಈದ್ ಮೀಲಾದ್ ಕಾರ್ಯಕ್ರಮದ 1500ನೇ ವರ್ಷಾಚರಣೆಯ ಪ್ರಯುಕ್ತ ಕಳಿಯ ಗ್ರಾಮ ಪಂಚಾಯತ್, ಸ್ನೇಹ ಸಂಗಮ ಆಟೋರಿಕ್ಷಾ ಚಾಲಕರ ಸಂಘ, ಈದ್ ಮೀಲಾದ್ ಸ್ವಾಗತ ಸಮಿತಿಯ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆ.24ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್., ಖತೀಬ ಮಹಮ್ಮದ್ ವಿಸ್ಬಾಹಿ, ಅಧ್ಯಕ್ಷ ಅಬೂಬಕ್ಕರ್ ಹಾಜಿ, ಝಿಯಾದ್ ಮುಈನಿ, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಲತೀಫ್ ಪರಿಮರ, ಈದ್ ಮಿಲಾದ್ ಸ್ವಾಗತ ಸಮಿತಿಯ ಅಶ್ರಫ್ ಜಿ.ಡಿ., ಪಂಚಾಯತ್ ಕಾರ್ಯದರ್ಶಿ ಕುಂಙ ಕೆ., ಅಬ್ದುಲ್ ಕಾದರ್ ಹಾಜಿ, ಹಾಜಿ ಇಸುಬು ಎಂ.ಕೆ., ಹಾಜಿ ಆದಂ ಬಿ.ಎಮ್., ಪಿ.ಎಸ್. ಮದನಿ, ಶರೀಫ್ ಜಿ., ಸಿದ್ದೀಕ್ ಜಿ.ಪುತ್ತಾಕ, ಎಚ್., ಇರ್ಫಾನ್ ಎಸ್., ಹಮೀದ್ ಜಿ.ಡಿ., ಮನ್ಸೂರ್ ಜಿ., ಸೈಫುಲ್ಲ, ರಹಿಮಾನ್ ಮಾಸ್ಟರ್, ಫಯಾಜ್, ಸುಲೈಮಾನ್, ಅಶ್ರಫ್ ಪದಗೋಳಿ, ರಫೀಕ್ ಕೆ.ಪಿ., ಬಶೀರ್ ಎಸ್. ಎಮ್. ಎಸ್., ಜಬ್ಬಾರ್, ನೌಷದ್ ಜಿ,ಅಚ್ಚು ಬಟ್ಟೆಮಾರು, ಹನೀಫ್ ಕೆ.ಎಂ., ಸವಾದ್ ಹಾಜರಿದ್ದರು. ಪರಪ್ಪುವಿನಿಂದ ಗೇರುಕಟ್ಟೆ ಬಸ್ ಸ್ಟಾಂಡ್ ವರೆಗೆ ರಸ್ತೆ ಬದಿಯಲ್ಲಿ ಮತ್ತು ಅಂಗಡಿ ಮುಂಗಟ್ಟನ್ನು ಸ್ವಚ್ಛಗೊಳಿಸಲಾಯಿತು.