Site icon Suddi Belthangady

ವಲಯ ಮಟ್ಟದ ಗೀತ ಗಾಯನ ಸ್ಪರ್ಧೆ, ನಡ ಪ. ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ನಿರ್ದೇಶನದಂತೆ ಬೆಳ್ತಂಗಡಿ ವಲಯ ಮಟ್ಟದ ಗೀತ ಗಾಯನ ಸ್ಪರ್ಧೆಯು ಆ.24ರಂದು ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ರೇಂಜರ್ ವಿಭಾಗದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ನಡ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ಮನ್ವಿತಾ, ಪ್ರಿಯ, ಗಾಯತ್ರಿ, ಸುಶ್ಮಿತಾ, ನವ್ಯಶ್ರೀ ಮತ್ತು ಶ್ರಾವ್ಯ ಭಾಗವಹಿಸಿದ್ದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ರೇಂಜರ್ ಲೀಡರ್ ವಸಂತಿ ಪಿ. ಅವರ ನೇತೃತ್ವದಲ್ಲಿ, ಲಿಲ್ಲಿ ಪಿ.ವಿ. ಮಾರ್ಗದರ್ಶನದಲ್ಲಿ, ಪ್ರಾಂಶುಪಾಲ ಚಂದ್ರಶೇಖರ್ ಅವರು ಪ್ರೋತ್ಸಾಹ ನೀಡಿದರು.

Exit mobile version