ಬೆಳಾಲು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೆಳಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು, ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ಆಶ್ರಯದಲ್ಲಿ ಬೆಳಾಲು ಶ್ರೀ ಧ.
ಮಂ. ಪ್ರೌಢ ಶಾಲೆಯಲ್ಲಿ ಆ. 27ರಂದು ನಡೆಯುವ 44ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಆ. 24ರಂದು ಊರವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಉದ್ಯಮಿ ಮೀನಂದೇಲು ಜನರಲ್ ಸ್ಟೋರ್ ಮಾಲಕ ಜಯಣ್ಣ ಗೌಡ ಕ್ರೀಡಾಕೂಟ ಉದ್ಘಾಟಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ ಪಾರಳ, ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿ ಹರೀಶ್ ಆಚಾರ್ಯ, ಬೆಳಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಧವ ಗೌಡ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ, ತೀರ್ಪುಗಾರರಾದ ಧರ್ಮೇಂದ್ರ ಕುಮಾರ್, ಕೃಷ್ಣಾನಂದ ರಾವ್, ಶಶಿಧರ ಓಡಿಪ್ರೊಟ್ಟು, ಸಂತೋಷ್ ಕುದ್ದಂಟೆ, ಸಮಿತಿಯ ಸದಸ್ಯರು, ಊರವರು, ಸ್ಪರ್ಧಿಗಳು ಹಾಜರಿದ್ದರು.