Site icon Suddi Belthangady

ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- 40 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.20 ಡಿವಿಡೆಂಡ್

ಬೆಳ್ತಂಗಡಿ: ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿಯ ವಾರ್ಷಿಕ ಮಹಾಸಭೆ ಆ.25ರಂದು ಸುವರ್ಣ ಆರ್ಕೆಡ್‌ನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಡಾ.ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆ ವಹಿಸಿ, ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 40 ಲಕ್ಷ ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದರು.

ಸಿಇಒ ವತ್ಸಲಾ ಜ್ಯೋತಿರಾಜ್ ಸಹಕಾರಿ ಸಂಘದ ಗತ ವರ್ಷದ ವರದಿ ಹಾಗೂ 2025-26ನೇ ಸಾಲಿನ ಬಜೆಟ್ ಮಂಡಿಸಿದರು.

ಕ್ಲಪ್ತ ಸಮಯದಲ್ಲಿ ದಂಡನೆ ಬಡ್ಡಿ ಇಲ್ಲದೆ ಸಾಲ ಮರುಪಾವತಿ ಮಾಡಿದ ಗ್ರಾಹಕರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸರಕಾರಿ ನೌಕರರ ಮಕ್ಕಳಿಗೆ ನೀಡುವ ಪ್ರೋತ್ಸಾಹಕ ಬಹುಮಾನವನ್ನು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 584 ಅಂಕ ಪಡೆದ ಎಎಸ್‌ಐ ದುರ್ಗಾದಾಸ್ ಬೆಳ್ತಂಗಡಿ ಅವರ ಪುತ್ರಿ ಸಂಜನಾ ಎಂ.ಡಿ. ಅವರಿಗೆ ನೀಡಲಾಯಿತು. ನಿರ್ದೇಶಕ ಅಬ್ದುಲ್ ರಜಾಕ್ (ಆರೋಗ್ಯ ಇಲಾಖೆ) ಹಾಗೂ ರತ್ನಾವತಿ(ಸಿಡಿಪಿಒ) ಅವರನ್ನು ಗೌರವಿಸಲಾಯಿತು. ಸಂಘದಲ್ಲಿ ಸಾಲ ಮೊತ್ತ ವಸೂಲಿಗಾಗಿ ನೇಮಕವಾಗಿದ್ದ ನಿರ್ಮಲ್ ಕುಮಾರ್ ನಾರಾವಿ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿದ್ದು ಅವರು ಇದೀಗ ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಸಂಘದ ಗ್ರಾಹಕರು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಲಾಯಿತು.

ಸಂಘದ ಉಪಾಧ್ಯಕ್ಷ ಚಿದಾನಂದ ಹೂಗಾರ್, ನಿರ್ದೇಕರಾದ ಅಬ್ದುಲ್ ರಜಾಕ್, ಚಂದ್ರಶೇಖರ್, ಪರಮೇಶ್, ರತ್ನಾವತಿ, ಆರತಿ, ಪ್ರಶಾಂತ್, ಹರಿ ಪ್ರಸಾದ್, ಪಾರಿಜಾ ಕೆ. ಕೊಕ್ಕಡ ಶಾಖಾ ಮ್ಯಾನೇಜರ್ ಉಪಸ್ಥಿತರಿದ್ದರು. ಸಂಘದ ಸಲಹೆಗಾರ ವಸಂತ ಸುವರ್ಣ ಸ್ವಾಗತಿಸಿದರು. ಸಿಬ್ಬಂದಿಗಳಾದ ಏಶಾಲಾ, ದಾಮಿನಿ ಸಹಕರಿಸಿದರು. ಸದಸ್ಯರು ಹಾಗೂ ಸಾರ್ವಜನಿಕರ ಉಪ ಯೋಗಕ್ಕಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ತಾಲೂಕು ಆಸ್ಪತ್ರೆಯ ನೇತ್ರ ತಜ್ಞ ಡಾ.ರಮೇಶ್ ಹಾಗೂ ತಂಡದವರು ಶಿಬಿರ ನಡೆಸಿದರು. 100ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.

Exit mobile version