ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಆ. 24ರಂದು ಯುವದಿನ ಆಚರಿಸಲಾಯಿತು.
ಯುವಜನರಲ್ಲಿ ಸ್ವಾವಲಂಬನೆಯನ್ನು ಬೆಳೆಸಲು ಸ್ವ ಉದ್ಯೋಗ ಮಾಹಿತಿ ತರಬೇತಿ ನೀಡಲಾಯಿತು. ಚರ್ಚಿನ ಧರ್ಮಗುರು ಅನಿಲ್ ಪ್ರಕಾಶ್ ಡಿ ಸಿಲ್ವ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಉಜಿರೆ ರುಡಸೆಟ್ ಸಂಸ್ಥೆಯ ಪ್ರಾಧ್ಯಾಪಕ ಅಬ್ರಹಾಂ ಜೇಮ್ಸ್ ಪಿ.ವಿ. ಅವರು ಸ್ವಾವಲಂಬನೆಯ ಜೀವನ ಸಾಗಿಸಲು ಅಗತ್ಯ ಇರುವ ವಿವಿಧ ಸ್ವ ಉದ್ಯೋಗದ ತರಬೇತಿ ನೀಡಿದರು.
ರಿತೇಶ್ ಯಂ. ಸ್ಟ್ರೆಲ್ಲ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಕ್ಟರ್ ಸುವಾರಿಸ್ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು.
ಚರ್ಚ್ ಪಾಲನಾ ಮಂಡಲಿಯ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೆರೋ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್,
ಸರ್ವ ಆಯೋಗಗಳ ಸಂಚಾಲಕಿ ವಿನಿಫ್ರೆಡ್ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವದಿನದ ಪ್ರಯುಕ್ತ ಶಿಬಿರಾರ್ಥಿ ಯುವಕ, ಯುವತಿಯರನ್ನು ಸನ್ಮಾನಿಸಲಾಯಿತು. ಜೆಸಿಂತಾ ಡಿ ಸೋಜಾ ಸ್ವಾಗತಿಸಿ, ಪ್ರಜ್ವಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಮೌರಿಸ್ ಡಿ ಸೋಜಾ, ವಿನ್ಸೆಂಟ್ ಮಿನೇಜಸ್, ವಿನ್ಸೆಂಟ್ ಸುವಾರಿಸ್, ದೀಪ ವಿ, ವಂ. ಅಶೋಕ ಡಿ ಸೋಜಾ ಸಹರಿಸಿದರು. ಪ್ರೀತಿ ಮರಿಯಾ ವಂದಿಸಿದರು.