ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2025 – 26ನೇ ಸಾಲಿನ ಮೊದಲ ಹಂತದ ಪಾಲಕರ ಸಭೆ ಹಾಗೂ ಶಿಕ್ಷಕ ರಕ್ಷಕ ಸಂಘದ ಆಯ್ಕೆ ಪ್ರಕ್ರಿಯೆ ಆ. 23ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಇದ್ದರು.
ಇದೇ ವೇಳೆ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ರಮೇಶ್ ಎಸ್.ಮಾಳಗೊಂಡ, ಉಪಾಧ್ಯಕ್ಷರಾಗಿ ಶೋಭಾ ಮರೋಡಿ, ಮಹಮ್ಮದ್ ರಫಿ, ಕೋಶಾಧಿಕಾರಿಯಾಗಿ ತುಳಸಿ ಎಂ, ಕಾರ್ಯದರ್ಶಿಯಾಗಿ ಗಣೇಶ್ ಶಿರ್ಲಾಲು, ಜತೆ ಕಾರ್ಯದರ್ಶಿಯಾಗಿ ಸೌಜನ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾ, ಪುಷ್ಪಾ, ಶಶಿಕಲಾ, ವನಿತಾ, ಗಣೇಶ್ ಬಂಗೇರ, ಚಿದಾನಂದ, ಮಹಮ್ಮದ್ ಮುಸ್ತಾಪ, ರಾಜಶೇಖರ್, ಕುಮಾರ್, ಗೋಪಾಲ್ ಆಯ್ಕೆಯಾದರು.
ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ.ಶಿರ್ಲಾಲು ಸ್ವಾಗತಿಸಿ, ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಮಾಯಾ ಭಟ್ ವಂದಿಸಿದರು.