ಬೆಳಾಲು: ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಹಳೆಪೇಟೆ ಉಜಿರೆ, ಮುಂಡಾಜೆ ಹಾಗೂ ಅಣಿಯೂರು ಕ್ಲಸ್ಟರ್ 14 ವರ್ಷವಯೋಮಾನದ ಬಾಲಕ , ಬಾಲಕಿಯರ
ವಲಯ ಮಟ್ಟದ ಕಬ್ಬಡಿ ಪಂದ್ಯಾಟ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮೂರು ಕ್ಲಸ್ಟರ್ಗಳ ಬಾಲಕರ 13 ತಂಡಗಳು ಹಾಗೂ ಬಾಲಕಿಯರ 6 ತಂಡಗಳು ಭಾಗವಹಿಸಿದ್ದವು. ಕಬಡ್ಡಿ ಪಂದ್ಯಾಟದ ಸವಾಲಿನಲ್ಲಿ ಹಲವು ತಂಡಗಳನ್ನು ಮಣಿಸಿ ಫೈನಲ್ಗೇರಿದ MDRS ಮುಂಡಾಜೆ ಶಾಲೆಯ ಬಾಲಕರು ಪ್ರಥಮ ಸ್ಥಾನ ಪಡೆದರೆ, SDM ಸೆಕೆಂಡರಿ ಶಾಲೆ ಉಜಿರೆಯ ಬಾಲಕರು ದ್ವಿತೀಯ ಸ್ಥಾನವನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ಸ.ಉ.ಪ್ರಾ.ಶಾಲೆ ಮುಂಡಾಜೆ ಪ್ರಥಮ ಸ್ಥಾನ ಪಡೆದರೆ, ಸ.ಉ.ಪ್ರಾ.ಶಾಲೆ ಬದನಾಜೆ ದ್ವಿತೀಯ ಸ್ಥಾನ ಪಡೆದರು.
ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಶಶಿಧರ ಶಿಲ್ಪಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಮೆಡಲ್ ಗಳನ್ನು ನೀಡಿ ಅಭಿನಂದಿಸಲಾಯಿತು. ತೀರ್ಪುಗಾರರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಾಲಕರ ವಿಭಾಗದಲ್ಲಿ ಬೆಸ್ಟ್ ರೈಡರ್ – ಶರಣ್ ಉಜಿರೆ ಎಸ್ ಡಿ ಎಂ ಸೆಕೆಂಡರಿ ಶಾಲೆ, ಬೆಸ್ಟ್ ಕ್ಯಾಚರ್- ರಜತ್ ಎಮ್.ಡಿ.ಆರ್.ಎಸ್. ಮುಂಡಾಜೆ, ಬೆಸ್ಟ್ ಆಲ್ರೌಂಡರ್-ಮನ್ವಿತ್ ಮುಂಡಾಜೆ ಪಡೆದರೆ,
ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ರೈಡರ್-ವರ್ಷಿತಾ ಬದನಾಜೆ, ಬೆಸ್ಟ್ ಕ್ಯಾಚರ್ – ಹೇಮಲತಾ ಮುಂಡಾಜೆ ಜಿ. ಯು. ಪಿ. ಎಸ್., ಬೆಸ್ಟ್ ಆಲ್ರೌಂಡರ್- ಸುಚಿತ್ರಾ ಜಿ. ಯು.ಪಿ. ಮುಂಡಾಜೆ ಆಗಿ ಟ್ರೋಫಿ ಪಡೆದರು.
ಸಮಾರೋಪ ವೇದಿಕೆಯಲ್ಲಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷರುಗಳಾದ ಸುರೇಂದ್ರ ಗೌಡ ಸುರುಳಿ, ಶೇಖರ ಗೌಡ ಕೊಲ್ಲಿ ಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ್ ಪಿ., ವಲಯ ಕ್ರೀಡಾ ಸಂಯೋಜಕ ಗಿರೀಶ್, ಬದಲಾಗಿ ಶಾಲೆಯ ದೈ.ಶಿ. ಶಿಕ್ಷಕ ನಿರಂಜನ್, ಮಾಯ ಶಾಲೆಯ ಮುಖ್ಯ ಶಿಕ್ಷಕ ವಿಠಲ್ ಎಂ. ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಜಾನ್ಸಿ ಸಿ.ವಿ. ಸ್ವಾಗತಿಸಿದರು. ಜಿಪಿಟಿ ಶಿಕ್ಷಕ ಯೋಗೇಶ್ ಹೆಚ್. ಆರ್. ನಿರೂಪಿಸಿದರು. ಶಿಕ್ಷಕಿಯರಾದ ಜ್ಯೋತಿ ಎಂ.ಎಸ್. ಹಾಗೂ ಕಾವ್ಯ ಬಹುಮಾನ ವಿತರಣಾ ಕಾರ್ಯ ನೆರವೇರಿಸಿದರು. ಅತಿಥಿ ಶಿಕ್ಷಕಿ ಪ್ರಜ್ಞಾ ವಂದಿಸಿದರು.