ಬೆಳ್ತಂಗಡಿ: ಬೆಳಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2025-26 ಆ.31ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವುದು. ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಖೋ-ಖೋ, ತ್ರೋಬಾಲ್, ಪುಟ್‌ಬಾಲ್ (ಪುರುಷರಿಗೆ ಮಾತ್ರ) ಮತ್ತು ಯೋಗಾಸನ ನಡೆಯಲಿದೆ.
ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವು ಸೆ. 7ರಂದು ಮಂಗಳಾ ಕ್ರೀಡಾಂಗಣ ಮಂಗಳೂರುನಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ, ಪ್ರಕಾಶ್ ಡಿ ಸೋಜ, ದೈಹಿಕ ಶಿಕ್ಷಣ ನಿರ್ದೇಶಕರು ಮಡಂತ್ಯಾರು ಮೊ. 9886104771, ಸಾಂತಪ್ಪ ಮೇಲ್ವಿಚಾರಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ ಮೊ.9686554606 ಇವರನ್ನು ಸಂಪರ್ಕಿಸಬಹುದು.
ಸ್ಪರ್ಧಾಳುಗಳು ಈ ಕೆಳಗಿನ ಲಿಂಕನ್ನು ನೋಂದಾವಣೆ ಮಾಡಬಹುದು https://dasaracmcup-2025.etrpindia.com/KA-sports