ಕಳೆಂಜ: ಪರಪ್ಪು- ಕುಕ್ಕಾಜೆ ರಸ್ತೆ ಮಧ್ಯ ಭಾಗವಾದ ಪರಪ್ಪು ಎಂಬಲ್ಲಿ ಕಿರು ಹೊಳೆ ಇದ್ದು, ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹೊಳೆಯ ಕೆಲ ಭಾಗ ಸಂಪೂರ್ಣ ಕೊಚ್ಚಿಕೊಂಡು ಹೋಗಿ, ವಾಹನಗಳು ಸಂಚಾರಕ್ಕೆ ತೊಂದರೆಯಾಗಿತ್ತು.
ಆ ಭಾಗದ ಜನರ ಒತ್ತಾಯದ ಮೇರೆಗೆ ಶಿಶಿಲ- ಅರಸಿನಮಕ್ಕಿ,ಶೌರ್ಯ, ವಿಪತ್ತು ನಿರ್ವಾಹಣ ಘಟಕದ ಸದಸ್ಯರಾದ ಹರೀಶ್ ಕುಮಾರ್ ವಳಗುಡ್ಡೆ, ಧನಂಜಯ ಗೌಡ ವಲಚ್ಚಿಲು ಇವರ ನೇತೃತ್ವದಲ್ಲಿ, ಊರವರಾದ ಕೇಶವ ಗೌಡ ವಳಗುಡ್ಡೆ, ಗುಣವರ್ಮ ಜೈನ್, ಗುರುವಪ್ಪ ನಾಯ್ಕ, ಧರ್ನಪ್ಪ ಗೌಡ ವಳಂಬಲ, ಸಹಕಾರದೊಂದಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.