ಉಜಿರೆ: ಗೋವಿಗಾಗಿ ನಿಧಿ ಯೋಜನೆಯಡಿ ಕಳೆಂಜ ನಂದ ಗೋಕುಲ ಗೋ ಶಾಲೆಯಲ್ಲಿ ಕಾಣಿಕೆ ಡಬ್ಬಿಯನ್ನು ನೀಡುವ ಮೂಲಕ ಗೋವು ಉಳಿದರೆ ನಾವು ಅಭಿಯಾನವು ಆ.26ರಂದು ಬೆಳಿಗ್ಗೆ 8.30ಕ್ಕೆ
ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.ಈ ಅಭಿಯಾನಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟನ್ನಾಯ ಚಾಲನೆ ನೀಡಲಿದ್ದಾರೆ.
ಉಜಿರೆಯ ಎಲ್ಲಾ ಹಿಂದೂ ವರ್ತಕರು, ಮನೆಯವರು ಕಾಣಿಕೆ ಡಬ್ಬಿಗಳನ್ನು ಪಡೆದು ಗೋವಿಗಾಗಿ ನಿಧಿ ಯೋಜನೆ ಯಶಸ್ವಿಗೊಳಿಸುವಂತೆ ಕಳೆಂಜ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ.ಎಂ. ದಯಕರ್ ತಿಳಿಸಿದ್ದಾರೆ.
ಆ. 26: ಗೋವಿಗಾಗಿ ನಿಧಿ: ಉಜಿರೆಯಲ್ಲಿ ಕಾಣಿಕೆ ಡಬ್ಬಿ ನೀಡುವ ಅಭಿಯಾನಕ್ಕೆ ಚಾಲನೆ
