ಬೆಳ್ತಂಗಡಿ: ಎಸ್.ಐ.ಟಿ ತಂಡದಿಂದ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಮಂಜುನಾಥ ಎನ್., ಎಂಬ ವಕೀಲರ ವಿರುದ್ಧ ರಘುರಾಮ ಶೆಟ್ಟಿ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಎಸ್.ಪಿ. ಕಚೇರಿಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ವಿಸ್ತೃತ ಮಾಹಿತಿ ನೀಡಲಾಗಿದೆ.
ಅದರಂತೆ, ಬೆಳ್ತಂಗಡಿ ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ (44) ಎಂಬವರು ನೀಡಿದ ದೂರಿನಂತೆ, ಆರೋಪಿ ಮಂಜುನಾಥ ಎನ್, ಎಂಬ ವಕೀಲರು, ಪ್ರಸ್ತುತ ಎಸ್.ಐ.ಟಿ ತಂಡದಿಂದ ನಡೆಯುತ್ತಿರುವ ಮೃತದೇಹಗಳ ಉತ್ಖನನ ಪ್ರಕ್ರಿಯೆಗೆ ಸಂಬಂಧಿಸಿದಂತೆ, ದಿನಾಂಕ:30.07.2025 ರಂದು ತಾನು ಓರ್ವ ವಕೀಲನಾಗಿ, ಸಾರ್ವಜನಿಕರ ನೆಮ್ಮದಿಗೆ ದಕ್ಕೆಯಾಗುವಂತಹ ಹಾಗೂ ಭಯವುಂಟು ಮಾಡುವಂತಹ ಅನಧಿಕೃತ ಮಾಹಿತಿಗಳನ್ನು ಒಳಗೊಂಡಿರುವ ಸುಳ್ಳು ಪತ್ರಿಕಾ ಪ್ರಕಟಣೆಯನ್ನು ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿದ ಹಿನ್ನೆಲೆಯಲ್ಲಿ, ಆತನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 96/2025, ಕಲಂ:353 (1)(b), 353 (2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಐ.ಟಿ ತಂಡದ ಕಾರ್ಯಾಚರಣೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ-ವಕೀಲ ಮಂಜುನಾಥ್ ಎನ್. ವಿರುದ್ಧ ಕೇಸ್ ದಾಖಲು
