ಬೆಳ್ತಂಗಡಿ: ಸೆ. 7ರಂದು ಜರಗಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಗುರುಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಆ. 22ರಂದು ಸಂಘದ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಜರಗಿತು.
ಸಂಘದ ಮಾಜಿ ಅಧ್ಯಕ್ಷರು ಶ್ರೀ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಾಜಿ ಅಧ್ಯಕ್ಷ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ನಿತೀಶ್ ಎಚ್., ಕೋಶಾಧಿಕಾರಿ ಪ್ರಶಾಂತ್ ಕುಮಾರ್, ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್ ನಿರ್ದೇಶಕರಾದ ಉಷಾ ಶರತ್, ವಿನೋದಿನಿ ರಾಮಪ್ಪ, ರವೀಂದ್ರ ಅಮೀನ್, ಸುನೀಲ್ ಕನ್ಯಾಡಿ, ವಿಶ್ವನಾಥ ಪೂಜಾರಿ, ಜಯ ಕುಮಾರ್ ನಡ, ಚಂದ್ರಶೇಖರ, ರೂಪೇಶ್ ಧರ್ಮಸ್ಥಳ, ಅನೂಪ್ ಬಂಗೇರ, ಗ್ರಾಮ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕುಕ್ಕೇಡಿ, ಲಕ್ಷ್ಮಣ ಪೂಜಾರಿ ಲಾಯಿಲ, ಗೋಪಾಲ ಪೂಜಾರಿ ಪುದುವೆಟ್ಟು, ವಸಂತ, ಸುನಿಲ್ ಸುಲ್ಕೇರಿ, ದಿವಾಕರ ಸಾಲ್ಯಾನ್ ನಡ, ನಾಗೇಶ್ ಆದೇಲು ಉಪಸ್ಥಿತರಿದ್ದರು.