ಬೆಳ್ತಂಗಡಿ: ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಸದಸ್ಯರಾದ ನೆರಿಯ ಲಲಿತಾ, ಅರಸಿನಮಕ್ಕಿಯ ಕಾಳಿ ಹಾಗೂ ಗೋಪಿಯವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಸೋಲಾರ್ ನ್ನು ತಾಲೂಕಿನ ಯೋಜನಾಧಿಕಾರಿ ಯಶೋಧರ ಅವರು ವಿತರಿಸಿದರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್, ಒಕ್ಕೂಟ ಅಧ್ಯಕ್ಷೆ ಅಶ್ವಿನಿ, ವಲಯ ಮೇಲ್ವಿಚಾರಕ ಗಣೇಶ್, ಸೇವಾಪ್ರತಿನಿಧಿ ಸರಿತಾ, ಅರುಣಾ, ರೂಪ ಅವರು ಉಪಸ್ಥಿತರಿದ್ದರು.