Site icon Suddi Belthangady

ಕಬಡ್ಡಿ ಪಂದ್ಯಾಟದಲ್ಲಿ ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

ಕುವೆಟ್ಟು: ಗುರುವಾಯನಕೆರೆ ಸ.ಹಿ.ಪ್ರಾ.ಶಾಲೆಯಲ್ಲಿ ಜರುಗಿದ ಗುರುವಾಯನಕೆರೆ-ಪುಂಜಾಲಕಟ್ಟೆ ವಲಯ ಮಟ್ಟದ 14 ವರ್ಷ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿಕೊಂಡಿದೆ. ಬೆಸ್ಟ್ ಕ್ಯಾಚರ್ ಆಗಿ 8ನೇ ತರಗತಿಯ ಮಹಮದ್ ಆಶಿಂ, ಆಲ್ರೌಂಡರ್ ಆಗಿ ಮಹಮ್ಮದ್ ಬಿಲಾಲ್ ಆಯ್ಕೆಯಾಗಿದ್ದಾರೆ. ಶಾಲಾ ದೈಹಿಕ ಶಿಕ್ಷಕಿ ಪೂರ್ಣಿಮಾ ಬಿ. ತರಬೇತಿ ನೀಡಿ, ಮುಖ್ಯೋಪಾಧ್ಯಾಯ ಭಾಸ್ಕರ್, ಶಾಲಾ ಅಧ್ಯಾಪಕ ವೃಂದ, ಎಸ್. ಡಿ. ಎಂ. ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ ಮತ್ತು ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರು.

Exit mobile version