ಮರೋಡಿ: ಗ್ರಾಮ ಪಂಚಾಯತ್ ಗ್ರಾಮ ಸಭೆಯು ಆ.22ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಅಧಿಕಾರಿ ಭಾಗವಹಿಸಿ ಗ್ರಾಮ ಸಭೆ ಮುನ್ನಡೆಸಿದರು. ಉಪಾಧ್ಯಕ್ಷ ಶುಭರಾಜ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರು, ಪದ್ಮಶ್ರೀ, ಯಶೋಧರ ಆಚಾರ್ಯ, ಉಮೇಶ್ ಸಾಲಿಯಾನ್, ಅಶೋಕ ಪೂಜಾರಿ, ಧನಲಕ್ಷ್ಮೀ, ಸಮಿತಾ, ಉಮಾವತಿ, ಸುನಂದಾ, ಯಶೋಧ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು. ಇಲಾಖಾ ಅಧಿಕಾರಿಗಳು ಭಾಗವಹಿಸಿ ಇಲಾಖಾ ಮಾಹಿತಿ ನೀಡಿದರು. ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್. ಅನುಪಾಲನ ವರದಿ ಲೆಕ್ಕ ಪತ್ರ ಮಂಡಿಸಿದರು.
ಮರೋಡಿ: ಗ್ರಾಮ ಪಂಚಾಯತ್ ಗ್ರಾಮ ಸಭೆ
