ಧರ್ಮಸ್ಥಳ: ಗ್ರಾಮದ ಕನ್ಯಾಡಿ ಸಮೀಪ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕನ್ಯಾಡಿ ನಿವಾಸಿ ಕೌಶಿಕ್ ಮೇಲೆ ಕಾರು ಡಿಕ್ಕಿ ಹೊಡೆದ ಘಟನೆ ಆ.20ರಂದು ರಾತ್ರಿ ನಡೆದಿದೆ. ಹೋಟೆಲ್ ಕೆಲಸ ಮುಗಿಸಿ ಬೆಳಗ್ಗೆ ಸುಮಾರು 10:30 ರಿಂದ 10:45 ರ ವೇಳೆ ಹೋಟೆಲ್ ಉದ್ಯಮಿ ಕೌಶಿಕ್ ಅವರು ಕನ್ಯಾಡಿ ಶಾಲೆಯ ಮುಂದೆ ಇರುವ ಅವರ ಹೋಟೆಲ್ ನಿಂದ ಕನ್ಯಾಡಿ ರಾಮ ಮಂದಿರದವರೆಗೆ ವಾಕಿಂಗ್ ಮಾಡಿ ಬರುವ ಸಂದರ್ಭದಲ್ಲಿ ಹೋಟೆಲ್ ಸ್ಥಳಕ್ಕೆ ತಲುಪುವ ವೇಳೆ ಧರ್ಮಸ್ಥಳದಿಂದ ಉಜಿರೆ ಕಡೆಗೆ ಹುಂಡೈ ಕಂಪನಿ ಸಾಂಟ್ರೋ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಚಾಲಕನು ಹಿಂದೆಯಿಂದ ಬಂದು ಗುದ್ದಿದ್ದಾರೆ. ಇದರ ಪರಿಣಾಮ ಕೌಶಿಕ್ ರಸ್ತೆಗೆಸೆಯಲ್ಪಟ್ಟು ಬಲ ಭುಜಕ್ಕೆ ಮತ್ತು ತಲೆ ಭಾಗಕ್ಕೆ ಗಾಯಗಳಾಗಿರುತ್ತದೆ. ತಕ್ಷಣ ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಗೆ ದೂರು ನೀಡಲಾಗಿದೆ.
ಧರ್ಮಸ್ಥಳ: ಪಾದಚಾರಿಗೆ ಕಾರು ಡಿಕ್ಕಿ: ಆಸ್ಪತ್ರೆಗೆ ದಾಖಲು
