ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇವರ ಆಶ್ರಯದಲ್ಲಿ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಆ. 21ರಂದು ನಡೆದ ಬೆಳ್ತಂಗಡಿ ತಾಲೂಕು ಮಟ್ಟದ 14 ವಯೋಮಿತಿಯ ಮಕ್ಕಳ ಕರಾಟೆ ಪಂದ್ಯಾಟದಲ್ಲಿ ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಸೋನಾಲ್ ಡಿ ಸೋಜಾ (8ನೇ) ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಯನ್ನು ಶಾಲಾ ಸಂಚಾಲಕ, ಗುರುಗಳು ವೋಲ್ಟರ್ ಡಿಮೆಲ್ಲೊ ಹಾಗೂ ಮುಖ್ಯೋಪಾಧ್ಯಾಯ ಗುರುಗಳು ಕ್ಲಿಫರ್ಡ್ ಪಿಂಟೋ ಅವರು ಅಭಿನಂದಿಸಿದರು.
ಕರಾಟೆ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಶಾಲೆಗೆ ದ್ವಿತೀಯ ಸ್ಥಾನ
