Site icon Suddi Belthangady

ಯೂಟ್ಯೂಬರ್ ಸಮೀರ್ ಎಂ.ಡಿ. ಗೆ ಜಾಮೀನು ಮಂಜೂರು

ಬೆಳ್ತಂಗಡಿ: ಯೂ ಟ್ಯೂಬರ್ ಸಮೀರ್ ಎಂ.ಡಿ.ಗೆ ದ.ಕ‌.ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ. ಎಸ್. ಐ. ಟಿ ತನಿಖೆ ನಡೆಸುತ್ತಿರುವ ಪ್ರಕರಣದ ಬಗ್ಗೆ ಸಮೀರ್ ಎಂಡಿ ತನ್ನ ಧೂತ ಯೂ ಟ್ಯೂಬ್ ಚಾನೆಲ್ ನಲ್ಲಿ ಎಐ ಆಧಾರಿತ 23ನಿಮಿಷದ ವೀಡಿಯೋ ಹರಿಬಿಟ್ಟಿದ್ದ, ಇದರಲ್ಲಿ ಪ್ರಚೋದನಕಾರಿ ಹೇಳಿಕೆ, ಕಪೋಲಕಲ್ಪಿತ ಎಐ ವೀಡಿಯೋ ಬಳಕೆ, ಪ್ರಕರಣದ ತನಿಖೆಗೂ ತೊಂದರೆಯನ್ನುಂಟು ಮಾಡುವ ಹಿನ್ನಲೆಯಲ್ಲಿ ಧರ್ಮಸ್ಥಳದ ಪೊಲೀಸ್ ಉಪನಿರೀಕ್ಷಕ ಸಮರ್ಥ್ ಆರ್ ಗಾಣಿಗೇರ್ 12-7-2025ರಂದು ದೂರು ದಾಖಲಿಸಿಕೊಂಡಿದ್ದರು.

ಈ ಬಗ್ಗೆ ಹೇಳಿಕೆ ನೀಡಲು ನಿಗದಿತ ಸಮಯದೊಳಗೆ ಠಾಣೆಗೆ ಹಾಜರಾಗುವಂತೆ ನೀಡಲಾದ ನೊಟೀಸ್ ಗೆ ಸ್ಪಂದಿಸದ ಸಮೀರ್ ನನ್ನು ಬಂಧಿಸಲು ಬಲೆ ಬೀಸಿ,ಬನ್ನೆರುಘಟ್ಟದ ಸಮೀಪ ಇರುವ ಸಮೀರ್ ಎಂ ಡಿ ಯ ಮನೆಗೆ ಧರ್ಮಸ್ಥಳ ಪೊಲೀಸರು ತಲುಪಿದ್ದರು. ಆದರೆ ಈಗ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಸುಮೋಟೋ ಪ್ರಕರಣಕ್ಕೆ ಸಂಬಂಧಿಸಿ ಸಮೀರ್ ನಿರೀಕ್ಷಣಾ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಇಂದು ಜಾಮೀನು ಮಂಜೂರಾಗಿದೆ.

Exit mobile version