ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಭಾರತ ಸ್ಕೌಟ್ ಮತ್ತು ಗೈಡ್ಸ್ ನ ರೋವರ್ಸ್ ರೇಂಜರ್ಸ್ ಬಂಗೇರ ದಳ ಇದರ 2025 -26ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಯುವ ಸ್ಪೂರ್ತಿ ತರಬೇತಿ ಕಾರ್ಯಕ್ರಮ ಆ. 21ರಂದು ನಡೆಯಿತು.
ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋವರ್ಸ್ ರೇಂಜರ್ಸ್ ಬದುಕಿಗೆ ಶಿಸ್ತನ್ನು ತರುವಂತಹುದು. ಅದರಲ್ಲಿನ ಅವಕಾಶಗಳ ಸದ್ಭಳಕೆ ಮಾಡಿಕೊಳ್ಳುವುದೇ ಬದುಕಿನ ಯಶಸ್ಸಿಗೆ ಕಾರಣವಾಗುತ್ತದೆ. ಪಿ. ಜಿ.ಆರ್ ಸಿಂಧ್ಯಾ ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತರಾದ ಬಳಿಕ ಇದರ ಘನತೆ ಇನ್ನೂ ಹೆಚ್ಚಿದೆ’ ಎಂದರು.
ಜೇಸಿಐ ಬೆಳ್ಮಣ್ ಇದರ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ತರಬೇತಿ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಆ ಮೂಲಕ ಬದುಕಿನ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲ ಬೆಳೆಸಿಕೊಳ್ಳಬೇಕು’ ಎಂದರು.
ತರಬೇತುದಾರರಾದ ಸ್ವಾತಿ ಜೆ ರೈ, ವೀರೇಂದ್ರ ಆರ್.ಕೆ., ಕಿಶನ್ ವಿಠಲ್ ತರಬೇತಿಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ , ರೋವರ್ಸ್ ಲೀಡರ್ ಅಮೃತ್, ರೇಂಜರ್ಸ್ ಲೀಡರ್ ಪಲ್ಲವಿ ಇದ್ದರು.
ರೇಂಜರ್ಸ್ ಕ್ಯಾಪ್ಟನ್ ಶುಭಲಕ್ಷ್ಮಿ ಸ್ವಾಗತಿಸಿದರು. ರೋವರ್ಸ್ ವಿದ್ಯಾರ್ಥಿಗಳಾದ ಸಾನಿಕಾ, ಅಂಕಿತ್ ಪರಿಚಯಿಸಿದರು. ದೀಪಕ್ ಹಾಗೂ ಖುಷಿ ಕಾರ್ಯಕ್ರಮ ನಿರೂಪಿಸಿದರು. ರೋವರ್ಸ್ ಕ್ಯಾಪ್ಟನ್ ರಾಕೇಶ್ ಕುಮಾರ್ ವಂದಿಸಿದರು.