Site icon Suddi Belthangady

ತಿಮರೋಡಿಯಲ್ಲಿ ಹೈಡ್ರಾಮ-ಉಡುಪಿ ಪೊಲೀಸರ ಆಗಮನ-ವಕೀಲರಿಂದ ಚರ್ಚೆ-ಇದೀಗ ಮಹೇಶ್ ಶೆಟ್ಟಿ ಉಡುಪಿ ಪೊಲೀಸರ ವಶಕ್ಕೆ-ಬಂಧನವಾಗಿಲ್ಲ ಅವರು ವಿಚಾರಣೆಗೆ ತೆರಳುತ್ತಿದ್ದಾರೆಂದ ಬೆಂಬಲಿಗರು

ಉಜಿರೆ: ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಕೇಸ್ ಹಿನ್ನಲೆ ಇಂದು ಉಡುಪಿ ಪೊಲೀಸರು ಮಹೇಶ್ ಶೆಟ್ಟಿ ಬಂಧನಕ್ಕೆ ಉಜಿರೆಗೆ ಆಗಮಿಸಿದರು.

ಈ ವೇಳೆ ಮಹೇಶ್ ಶೆಟ್ಟಿ ಪರ ವಕೀಲರು ಪೊಲೀಸರನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದಾಗ ವಿಸ್ತೃತ ಚರ್ಚೆ ನಡೆದಿದೆ. ಗಿರೀಶ್ ಮಟ್ಟಣ್ಣನವರ್ ಕೂಡ ಪ್ರಶ್ನಿಸಿದರು. ನಂತರ ಬಹಳ ಕಾಲ ತಿಮರೋಡಿ ಮನೆಯಲ್ಲಿ ಹೈಡ್ರಾಮ ನಡೆದು, ಅಂತಿಮವಾಗಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.

Exit mobile version