ಕಾಶಿಪಟ್ಣ: ಸಮುದಾಯದ ಹಿತ ಮತ್ತು ಶಿಕ್ಷಣದ ಪ್ರಗತಿಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಬಿ- ಹ್ಯೂಮನ್ ಟ್ರಸ್ಟ್ ಅಧ್ಯಕ್ಷ ಶರೀಫ್ ಹಾಜಿ ಅವರು ಸರ್ಕಾರಿ ಪ್ರೌಢಶಾಲೆ, ಕಾಶಿಪಟ್ಣಗೆ ಒಂದು ವಾಟರ್ ಕೂಲರ್‌ನನ್ನು ದಾನವಾಗಿ ನೀಡಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಶ್ವತ ಅನುಕೂಲವನ್ನು ಒದಗಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಮಂಡಳಿ, ಟ್ರಸ್ಟ್ ಅಧ್ಯಕ್ಷ ಶರೀಫ್ ಹಾಜಿ ಮತ್ತು ಬಿ- ಹ್ಯೂಮನ್ ಟ್ರಸ್ಟ್‌ನ ಈ ಮಾನವೀಯ ಮತ್ತು ಸಮಾಜಸೇವಾ ಯೋಜನೆಗೆ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳು, ಈಗ ಶುದ್ಧವಾದ ತಂಪು ನೀರು ಮತ್ತು ಬಿಸಿನೀರನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಅವರ ಆರೋಗ್ಯ ಮತ್ತು ಚಟುವಟಿಕೆಗೆ ಒಂದು ಮಹತ್ವದ ಅಂಶವಾಗಿದೆ.
ಶಾಲಾ ಮಕ್ಕಳು, “ನಮಗೆ ಶುದ್ಧ ನೀರು ಕುಡಿಯಲು ಸಿಗುತ್ತದೆ” ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಶರೀಫ್ ಹಾಜಿ ಅವರ ಈ ನಿಃಸ್ವಾರ್ಥ ಸೇವೆಯು ಸಮಾಜದಲ್ಲಿ ಮತ್ತೊಬ್ಬರ ಕಲ್ಯಾಣಕ್ಕಾಗಿ ಯೋಚಿಸುವ ದಾನಶೀಲತೆಗೆ ಒಂದು ಉತ್ತಮ ಮಾದರಿಯಾಗಿದೆ. ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಮುದಾಯದಿಂದ ಬಿ- ಹ್ಯೂಮನ್ ಟ್ರಸ್ಟ್ ಮತ್ತು ಅದರ ಅಧ್ಯಕ್ಷ ಶರೀಫ್ ಹಾಜಿ ಅವರಿಗೆ ಮತ್ತು ಅವರ ಉದಾರ ಸೇವೆಗೆ ಅಭಿನಂದನೆ ಸಲ್ಲಿಸಿದ್ದಾರೆ.