Site icon Suddi Belthangady

SSLC, PUC ಇದೀಗ ಖಾಸಗಿ ಹಾಗೂ ನೇರ ಪರೀಕ್ಷೆಗೆ ಅನುಗ್ರಹ ಟ್ರೈನಿಂಗ್ ಕಾಲೇಜಿಗೆ BISE ಬೋರ್ಡ್ ಮಾನ್ಯತೆ

ಬೆಳ್ತಂಗಡಿ: ಎಂ.ಜಿ. ತಲ್ಹತ್ ಸವಣಾಲು ಅವರ ಶೈಕ್ಷಣಿಕ ಕಾಳಜಿ ಹಾಗೂ ನಿರಂತರ ಪ್ರಯತ್ನದಿಂದ ಮುನ್ನಡೆಸುತ್ತಿರುವ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನಡಿ ಬೆಳ್ತಂಗಡಿ, ಮುಡಿಪುನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ತಾಂತ್ರಿಕ, ವೃತ್ತಿಪರ ಹಾಗೂ ಡಿಪ್ಲೋಮಾ ಶಿಕ್ಷಣದ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದೀಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಅವಕಾಶ ಒದಗಿಸಿದೆ.ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಬೆಂಗಳೂರಿನ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲ್ ಸ್ಕೂಲ್ ಎಜುಕೇಶನ್ ನೊಂದಿಗೆ ಅನುಗ್ರಹ ಟ್ರೈನಿಂಗ್ ಕಾಲೇಜು ಅ 19 ರಂದು ಅಧಿಕೃತ ಕರಾರು ಮಾಡಿಕೊಂಡಿದ್ದು, ಕಾಲೇಜಿಗೆ ಅಧಿಕೃತ ಮಾನ್ಯತೆ ದೊರಕಿದೆ.

ಇದರಿಂದ ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ SSLC ಮತ್ತು PUC ಖಾಸಗಿ ಮತ್ತು ನೇರ ಪರೀಕ್ಷಾ ಕೇಂದ್ರವಾಗಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯುವ, SSLC ಮತ್ತು PUC ಫೈಲ್ ಆದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಹಾಗೂ ಮರು ಪರೀಕ್ಷೆ ಬರೆಯುವ, ಅರ್ಧದಲ್ಲಿ ಬಿಟ್ಟ ವಿದ್ಯಾರ್ಥಿಗಳಿಗೆ, ಫೈಲ್ ಆದ ವಿದ್ಯಾರ್ಥಿಗಳಿಗೆ ನೇರವಾಗಿ SSLC ಹಾಗೂ PUC ಪರೀಕ್ಷೆಗೆ ಹಾಜರಾಗುವ ಅವಕಾಶಗಳು ಸಿಕ್ಕಿವೆ. ಇದೀಗ ಅನುಗ್ರಹ ಟ್ರೈನಿಂಗ್‌ ಕಾಲೇಜಿನಲ್ಲಿ ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಖಾಸಗಿ ಹಾಗು ನೇರ ಶಿಕ್ಷಣದ ಸೌಲಭ್ಯಗಳ ಮೂಲಕ, ಪ್ರತಿ ವಿದ್ಯಾರ್ಥಿಗೂ ಭವಿಷ್ಯ ಕಟ್ಟಿಕೊಳ್ಳುವ, ಶಿಕ್ಷಣ ಮುಂದುವರಿಸಲು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಕ್ಕಾಗಿ, ವಿದೇಶ ಪಯಣ, ಪಾಸ್ಪೋರ್ಟ್ ಎಲ್ಲದಕ್ಕೂ ಸಮಾನವಾದ ಮಾನ್ಯವಾಗಿರುವುದರಿಂದ, ವೃತ್ತಿಪರ ಮತ್ತು ಡಿಪ್ಲೋಮಾ ಕೋರ್ಸ್ ಮಾಡುವ ಜೊತೆಗೆ SSLC, PUC ಮಾಡುವ ಅವಕಾಶ ಸಿಗಲಿದೆ.

ಅನುಗ್ರಹ ಟ್ರೈನಿಂಗ್ ಕಾಲೇಜು ಕಳೆದ ಕೆಲವು ವರ್ಷಗಳಿಂದ ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿಪರ ತರಬೇತಿಯನ್ನು ನೀಡಿ ಉದ್ಯೋಗ ಕ್ಷೇತ್ರಕ್ಕೆ ತಯಾರು ಮಾಡುತ್ತಿದ್ದು, ಇದೀಗ ದೊರೆತಿರುವ ಮಾನ್ಯತೆಯಿಂದ ಬೆಳ್ತಂಗಡಿ ಹಾಗೂ ಜಿಲ್ಲೆಯ ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವ ಪ್ರಮುಖ ಅವಕಾಶ ಸಿಗಲಿದೆ.

ಸಂಸ್ಥೆಯ ಮುಖ್ಯಸ್ಥ ಎಂ ಜಿ ತಲ್ಹತ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಮತ್ತು ಅಬ್ದುಲ್ ಖಾದರ್ ʼ ಇದು ಬೆಳ್ತಂಗಡಿ ಹಾಗೂ ಜಿಲ್ಲೆಯ ಶಿಕ್ಷಣ ವಲಯಕ್ಕೆ ಹೊಸ ಚರಿತ್ರೆಯ ಆರಂಭ. ಪ್ರತಿಯೊಬ್ಬ ವಿದ್ಯಾರ್ಥಿಗೂ SSLC, PUC ಪೂರೈಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ನಮ್ಮ ಸಂಸ್ಥೆ ಎಲ್ಲಾ ರೀತಿಯ ನೆರವು ನೀಡಲು ಸಜ್ಜಾಗಿದೆಈ ಮೂಲಕ, ಶಿಕ್ಷಣದಲ್ಲಿ ಹಿಂದೆ ಬಿದ್ದ ವಿದ್ಯಾರ್ಥಿಗಳು ಮತ್ತೆ ತಮ್ಮ ಜೀವನವನ್ನು ಮರು ಕಟ್ಟಿಕೊಳ್ಳುವ ಅಪೂರ್ವ ಅವಕಾಶ ದೊರೆತಿದೆ ಎಂದಿದ್ದಾರೆ.

ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು ಎಲ್ಲರೂ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯನ್ನು ಅನುಗ್ರಹ ಟ್ರೈನಿಂಗ್ ಕಾಲೇಜು, ಶ್ರೀ ರಾಮ ಕಾಂಪ್ಲೆಕ್ಸ್, ಸಂತೆಕಟ್ಟೆ, ಬೆಳ್ತಂಗಡಿ, 8861112182 ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು, ಎಸ್ ಕೆ ಟವರ್, ಮೊದಲನೇ ಮಹಡಿ, ಮುಡಿಪು, 8431882182 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version