ಬೆಳ್ತಂಗಡಿ: ಮೌಲೆ ಶೋಟೋಕಾನ್ ಕರಾಟೆ ಡೊ ಅಸೋಸಿಯೇಷನ್, ಇಂಡಿಯಾ, ಆಯೋಜಿಸಿದ 6ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯಾವಳಿಯಲ್ಲಿ ಉಜಿರೆಯ ಮೋಹನ್ ಭಾಗವಹಿಸಿ ಬ್ಲಾಕ್ ಬೆಲ್ಟ್ 21ವಯೋಮಾನ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಉಜಿರೆಯ ಕುಂಜರ್ಪ ನಿವಾಸಿ ವೇದಾವತಿ ಮತ್ತು ದಿ. ಆನಂದ ಪೂಜಾರಿ ಅವರ ಪುತ್ರರಾಗಿರುತ್ತಾರೆ. ನಿಟ್ಟೆ ಎನ್. ಎಂ. ಎ. ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ತೃತೀಯ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಶಿಹಾನ್ ಅಬ್ದುಲ್ ರಹ್ಮಾನ್ ರವರೊಂದಿಗೆ ತರಬೇತಿಯನ್ನು ಪಡೆದಿರುತ್ತಾರೆ.