Site icon Suddi Belthangady

ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರೋತ್ಸವ

ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಪಂಚಾಯತ್ ಸದಸ್ಯರಾದ ಹೇಮಂತ್, ಪದ್ಮಾವತಿ, ಅತಿಥಿಗಳಾದ ವಿಶ್ವನಾಥ ಲಿಂಗಾಯಿತಾ ಧ್ವಜಾರೋಹಣ ನೆರವೇರಿಸಿದರು.

ಸಭಾಧ್ಯಕ್ಷ ಚಂದ್ರಪೂಜಾರಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾತ್ಮರನ್ನು ನೆನಪಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರುತಿ ಎ., ಸಲಹಾ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಕೊರಗಪ್ಪ ನಾಯ್ಕ ಗಿಳಿಕಾಪು, ಎಂ.ಸಿ. ನಾರಾಯಣ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಘುನಾಥ, ಪದ್ಮನಾಭ ಶೆಟ್ಟಿ, ಕೃಷಿ ಸಖಿ ಪೂರ್ಣಿಮ, ಬಾಲವಿಕಾಸ ಸಮಿತಿ ಹಾಗೂ ಸಲಹಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರಿನ ಗಣ್ಯರು, ಮಕ್ಕಳ ಪೋಷಕರು, ಸ್ನೇಹ, ಕಾವೇರಿ ಸ್ತ್ರೀ ಶಕ್ತಿ ಸಂಘ, ಧರ್ಮಶ್ರೀ ಸಂಜೀವಿನಿ ಸಂಘ, ಪಲ್ಗುಣಿ, ಶಾಶ್ವತಿ ಸ್ವ ಸಹಾಯ ಸಂಘಗಳ ಅಧ್ಯಕ್ಷ ಕಾರ್ಯದರ್ಶಿಗಳು, ಸದಸ್ಯರು, ಹಳೆವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು. ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕಿ ಸುನಂದ, ರಾಜನ್ ಪಾವುಲ್, ಅರುಣ ಮೆಹೆಂದಳೆ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಮನಿತಾ ಸಿ. ಶೆಟ್ಟಿ ನಿರೂಪಿಸಿ, ವಂದಿಸಿದರು.

Exit mobile version