ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಪುತ್ತೂರು ಇದರ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ 79ನೇ ಸ್ವಾತಂತ್ರ್ಯ ದಿನೋತ್ಸವವನ್ನು ಭಾರತ ಮಾತಾ ಪೂಜನದೊಂದಿಗೆ ಯೋಗ ಬಂಧುಗಳು ಆಚರಿಸಿದರು.
ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸತೀಶ್ ನಾಳ ನಿತ್ಯದ ಯೋಗ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿ ಸ್ವಾತಂತ್ರೋತ್ಸವದ ಸಂದೇಶವನ್ನು ನೀಡಿದರು. ಸ್ವಾತಂತ್ರ್ಯ ಹೋರಾಟಗಾರರ ಮತ್ತು ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ಸದಾ ನಿರತರಾದ ಯೋಧರನ್ನು ಸ್ಮರಿಸಿ ಗೌರವಿಸುವುದು, ದೇಶದ ಐಕ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಯೋಗ ಕೇಂದ್ರದ ವರದಿ ಪ್ರಮುಖ ಕೇಶವ, ಸಂಚಾಲಕ ವಿಜಯ, ಸಹ ಶಿಕ್ಷಕ ಸುಕೇಶ, ಅಶೋಕ, ವಸಂತ, ದಿವಾಕರ, ಗಣೇಶ, ಪದ್ಮಲತಾ, ಅರುಣ, ಭಾರತಿಯವರು ಭಾರತ ಮಾತಾ ಪೂಜನದಲ್ಲಿ ಭಾಗವಹಿಸಿದರು.