ಗೇರುಕಟ್ಟೆ: ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ವ್ಯಾಪ್ತಿಯ 77 ಮೊಹಲ್ಲಾ ಜಮಾಅತಿನ ಪ್ರತಿನಿಧಿ ಸಮಾವೇಶ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಗೇರುಕಟ್ಟೆ ಕಳಿಯ ಕ್ರಿ ಷಿಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಆ. 19ರಂದು ಅಪರಾಹ್ನ ಜರಗಿತು.
ಸಮಿತಿಯ ಕೋಶಾಧಿಕಾರಿ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕೇರಳ ಪುಟ್ಟುಕ್ಕೆರೆ ಮುಹಿಯುದ್ದೀನ್ ಸಅದಿ ಉಸ್ತಾದರು ಖಾಝಿಗಳ ಅರ್ಹತೆ ಮತ್ತು ಮೊಹಲ್ಲಾ ಜಮಾಅತಿನ ಜವಾಬ್ದಾರಿಗಳ ಬಗ್ಗೆ ವಿಷಯ ಮಂಡನೆ ನಡೆಸಿದರು.
ಇನ್ನೋರ್ವ ಮುಖ್ಯ ಅತಿಥಿ ಅಬ್ದು ಮಾನಿಪ್ಪುರಂ ಅವರು ಯೋಜನೆ ಮಂಡನೆ ನಡೆಸಿದರು. ವೇದಿಕೆಯಲ್ಲಿ ಸಯ್ಯದ್ ಹುಸೈನ್ ತಂಙಳ್ ಉಜಿರೆ, ಅಶ್ರಫ್ ಸಖಾಫಿ ಮಾಡಾವು, ಪರಪ್ಪು ಮುಹಮ್ಮದ್ ಮಿಸ್ಬಾಹಿ ಉಸ್ತಾದ್, ಪರಪ್ಪು ಮಸೀದಿ ಕಾರ್ಯದರ್ಶಿ ಕೆರೀಂ ಗೇರುಕಟ್ಟೆ, ಕಾಸಿಂ ಪದ್ಮುಂಜ, ಶಾಫಿ ಸಖಾಫಿ ಕೊಕ್ಕಡ, ಅಬ್ಬಾಸ್ ಬಟ್ಲಡ್ಕ, ತಸ್ಲಿಮ್ ಸಖಾಫಿ ಮರ್ಖಝ್, ಸಲೀಂ ಕನ್ಯಾಡಿ ಉಪಸ್ಥಿತರಿದ್ದರು. ತಾಲೂಕು ಬೇರೆ ಬೇರೆ ಜಮಾಅತಿನ ಆಡಳಿತ ಸಮಿತಿಯ ಪದಾಧಿಕಾರಿಗಳು ಬೆಳ್ತಂಗಡಿ ಸಂಯುಕ್ತ ಜಮಾಅತ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದರ್ರಝಾಖ್ ಸಖಾಫಿ ಮಡಂತ್ಯಾರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.