Site icon Suddi Belthangady

ದಿಡುಪೆ: 39ನೇ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ದಿಡುಪೆ: ಮಲವಂತಿಗೆ ಅ. ಖಾ. ಹಿ. ಪ್ರಾ. ಶಾಲೆ, ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಪ್ರಯುಕ್ತ ಆ. 27 ಮತ್ತು 28ರಂದು ನಡೆಯುವ 39ನೇ ವರ್ಷದ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವದ
ಆಮಂತ್ರಣ ಪತ್ರಿಕೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ಆ. 17ರಂದು ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯುವ ವಕೀಲ ಪೃಥ್ವಿಶ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು ಮತ್ತು ಪಂಚಾಯತ್ ಸದಸ್ಯ ಪವಿತ್ರ ನಾರಾಯಣ ಪೂಜಾರಿ ಹಾಗೂ
ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ತೀಕ್ಷಿತ್ ಕೆ. ಕಲ್ಬೆಟ್ಟು ದಿಡುಪೆ, ಕಾರ್ಯದರ್ಶಿ ಜಯಂತ ಹೆಗ್ಡೆ ಹೊಸತೋಟ ಹಾಗೂ ಗೌರವಾಧ್ಯಕ್ಷರಾಗಿ ಕರಿಯ ಗೌಡ ಕೊಟ್ರಡ್ಕ ಮತ್ತು
ವಿವಿಧ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

Exit mobile version