Site icon Suddi Belthangady

ಸುಧೆಮುಗೇರು: ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ: ಸುಧೆಮುಗೇರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸುದೆಮುಗೇರು ಗ್ರಂಥಾಲಯ ಕಟ್ಟಡದ ಬಳಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸರಕಾರಿ ನೌಕರ ಎಂ.ಆರ್. ಪ್ರಸನ್ನ ಧ್ವಜಾರೋಹಣವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕಲಾವಿದ ರಾಜೀವ್ ಬಿ. ಹೆಚ್. ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಪ್ರಸಾದ್ ಸುದೆಮುಗೇರು ಉಪಸ್ಥಿತರಿದ್ದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಈ ಸಮಾರಂಭದಲ್ಲಿ ಅಂಗನವಾಡಿ ಸಹಾಯಕಿ ರೋಹಿಣಿ ಸ್ವಾಗತಿಸಿ, ವಂದಿಸಿದರು.

Exit mobile version