Site icon Suddi Belthangady

ನೆರಿಯ: ಅಕ್ರಮ ಗಣಿಗಾರಿಕೆ: ಗಣಿ ಇಲಾಖೆ ದಾಳಿ

ನೆರಿಯ : ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಅನುಮತಿ ಪಡೆದು ನದಿ ಪರಂಬೋಕು ಸೇರಿದಂತೆ ಸರಕಾರಿ ಜಾಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಬೋಬನ್ ಎಂಬವರ ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದು ನದಿಯ ಪರಂಬೋಕು ಜಾಗದಲ್ಲಿ ಮುಂಡಾಜೆ ನಿವಾಸಿ ಜಾನ್ ಎಂಬವರ ಮಗ ಪವನ್ ಎಂಬಾತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.18ರಂದು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಸುಧಾ ನೇತೃತ್ವದಲ್ಲಿ ಬೆಳ್ತಂಗಡಿ ಕಂದಾಯ ಇಲಾಖೆ ಮತ್ತು ಭೂಮಾಫನ ಹಾಗೂ ಧರ್ಮಸ್ಥಳ ಪೊಲೀಸರ ಸರಕಾರದಲ್ಲಿ ದಾಳಿ ಮಾಡಿದ್ದಾರೆ.

Exit mobile version