Site icon Suddi Belthangady

ಬೆಳ್ತಂಗಡಿ: ಸುದೆಮುಗೇರು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ: ಸುದೆಮುಗೇರು ಅಂಗನವಾಡಿ ಕೇಂದ್ರದಲ್ಲಿ ಆ. 15ರಂದು ಬೆಳಿಗ್ಗೆ 8ಗಂಟೆಗೆ 79ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯೋತ್ಸವ ನಡೆಯಿತು. ವಾರ್ಡ್ ಸದಸ್ಯ ಡಿ. ಜಗದೀಶ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿದ ನಂತರ 14 ಮಂದಿ ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಮತ್ತು ಮಕ್ಕಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ,ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಅಂಗನವಾಡಿ ಶಿಕ್ಷಕಿ ದಿವ್ಯ, ಸಹಾಯಕಿ ರೋಹಿನಿ ಅಶೋಕ್ ಸುದೆಮುಗೇರು, ಶರತ ಬಾಲವಿಕಾಸ ಸಮಿತಿ ಅಧ್ಯಕ್ಷ ನಾಜ್ ಮಿನ್ ಉಪಸ್ಥಿತರಿದ್ದರು. ಸುಮಾರು 70ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆ ಅಶೋಕ್ ಸುದೆಮುಗೇರು ನಿರ್ವಹಿಸಿದರು. ಅತಿಥಿಗಳಿಗೆ, ಸಾರ್ವಜನಿಕರಿಗೆ ಶಿಕ್ಷಕಿ ದಿವ್ಯ ಧನ್ಯವಾದವಿತ್ತರು.

Exit mobile version