ಉಜಿರೆ: ಮಾಚಾರು ಪ್ರಗತಿ ಯುವಕ ಮಂಡಲ, ಯುವತಿ ಮಂಡಲ, ಬದನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಹಾಗೂ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ-ಬದನಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆ. 17ರಂದು ನಡೆಸಲಾಯಿತು.
ಉದ್ಘಾಟನೆಯನ್ನು ಸ್ಥಳೀಯರಾದ ಗುರುವಪ್ಪ ಪೂಜಾರಿ ಹಿಪ್ಪ ನೆರವೇರಿಸಿ ಶುಭ ಹಾರೈಸಿದರು. ನಂತರ ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಪಿತಾಂಬರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬದನಾಜೆ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಠಲ ನಾಯ್ಕ್, ವಿಶಾಲ್ ಸೇವಾ ಟ್ರಸ್ಟ್ ಉಜಿರೆ ಇದರ ಮೇನೆಜಿಂಗ್ ಟ್ರಸ್ಟಿ ವಲೇರಿಯನ್ ಡಿಸೋಜ, ಕೃಷ್ಣಾಪುರದ ಕಿಡ್ಮಾ ಶಾಲೆಯ ಪ್ರಾಂಶುಪಾಲ ಶರೀಫ್ ಮುಹೀನಿ ಸಂದೇಶಗಳನ್ನು ನೀಡಿದರು.
ವೇದಿಕೆಯಲ್ಲಿ ಬದನಾಜೆ ಶಾಲಾ ಮುಖ್ಯೋಪಾಧ್ಯಾಯ ನಿರಂಜನ್, ಉಜಿರೆ ಗ್ರಾ.ಪಂ.ಸದಸ್ಯರುಗಳಾದ ಬಿ.ಎಂ.ಇಲ್ಯಾಸ್, ಗುರುಪ್ರಸಾದ್, ಅನಿಲ್ ಡಿಸೋಜ, ಸವಿತ,ನಾಗವೇಣಿ ಸೇರಿದಂತೆ, ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯ ಗೌಡ, ಯುವತಿ ಮಂಡಲದ ಅಧ್ಯಕ್ಷೆ ನವೀನ, ಬದನಾಜೆ ಪ್ರೌಢಶಾಲೆಯ ಉಪಾಧ್ಯಕ್ಷೆ ಅರುಣಾಕ್ಷಿ ಉಪಸ್ಥಿತರಿದ್ದರು. ಬಹುಮಾನಗಳ ಪಟ್ಟಿಯನ್ನು ಸದಸ್ಯ ಮೋಹನ್ ಎಚ್.ಬಿ.ವಾಚಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಅಕ್ಷಯ ಮಾಚಾರ್ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಮಾಚಾರ್ ನಿರೂಪಿಸಿ, ಜೊತೆಕಾರ್ಯದರ್ಶಿ ಯೋಗೀಶ್ ಪೆರುಂಬುಡೇಲು ವಂದಿಸಿದರು.