Site icon Suddi Belthangady

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಎಸ್‌. ಡಿ. ಎಂ. ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ ಅವರು ಧ್ವಜಾರೋಹಣ ಮಾಡಿದರು. ತದನಂತರ ಬ್ಯಾಂಡ್ ಸೆಟ್ ನೊಂದಿಗೆ ಪ್ರಭಾತ್ ಬೇರಿಯನ್ನು ಮಾಡಲಾಯಿತು.

ಸಿರಾಜ್ ಎಂ. ಚಿಲಿಂಬಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಶಾಲಿನಿ, ಅಮೀನಾ, ಶಾಲಾ ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಲಾವಣ್ಯ ಶೆಟ್ಟಿ ಅರ್ಕಜೆ, ದಾನಿಗಳಾದ ಶಂಸುಲ್ ಉಲಾಮಾ, ಕ್ರಿಯಾ ಸಮಿತಿ ಮದ್ದಡ್ಕ ಇದರ ಗೌರವಾಧ್ಯಕ್ಷ ಎಂ.ಎ. ಅಬ್ದುಲ್ ಖಾದರ್, ಉಪಾಧ್ಯಕ್ಷ ರಿಜ್ವಾನ್, ಕೊಡುಗೆ ದಾನಿಗಳಾದ ಸಾಜಿದ್ ಮದ್ದಡ್ಕ, ಉಪೇಂದ್ರ ಆಚಾರ್ಯ, ಧನಂಜಯ ಕುಮಾರ್ ಆಲಂದಿಲ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್, ಶಾಲಾ ನಾಯಕಿ ರಾಯಿಶ, ಎಸ್.ಡಿ.ಎಂ.ಸಿ ಸದಸ್ಯರು, ಧ.ಗ್ರಾ.ಯೋ. ಸೇವಾನಿರತೆ ಜಾನಕಿ ಎಸ್. ಮತ್ತಿತರರು ಉಪಸ್ಥಿತರಿದ್ದರು.

ಚಂದ್ರಹಾಸ ಕೇದೆ ಮನೆ ಹಾಗೂ ಮುರಳಿಧರ ಕೇದಳಿಕೆ ಅವರು ನೀಡಿದ ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೂತನ ಶಾಲಾ ವಿದ್ಯಾರ್ಥಿಗಳಿಗೆ ಐ.ಡಿ, ಟೈ, ಬೆಲ್ಟ್ ವಿತರಣೆ ಕಾರ್ಯಕ್ರಮ ಜರುಗಿತು. ಸಹ ಶಿಕ್ಷಕಿ ಧವಲಾ ಎ. ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ವೃಂದ ಸಹಕರಿಸಿದರು. ಹಿರಿಯ ಶಿಕ್ಷಕಿ ಫಿಲೋಮಿನ ಲೋಬೋ ವಂದಿಸಿದರು‌.

Exit mobile version