ಧರ್ಮಸ್ಥಳ: ಅನಾಮಿಕ ವ್ಯಕ್ತಿ ಕೊಟ್ಟ ದೂರಿಗೆ ಸಂಬಂಧ ಪಟ್ಟಂತೆ ಎಸ್‌ಐಟಿ ತನಿಖೆಯ ವಿಚಾರ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಗೃಹ ಸಚಿವ ಜಿ ಪರಮೇಶ್ವರ್ ತನಿಖೆಯ ಮುಂದಿನ ಹಂತದ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಉತ್ಪನನ ಸಂದರ್ಭದಲ್ಲಿ ಸಿಕ್ಕಿರುವ ಅಸ್ಥಿಪಂಜರದ ಪ್ರತಿಯೊಂದು ಜಾಗದ ಅನಾಲಿಸಿಸ್ ಆಗಿ ವಿಸ್ತ್ರತ ತನಿಖೆ ನಡೆಯಬೇಕು. ಮಣ್ಣಿನ, ಎಲುಬಿನ ಡಿಎನ್‌ಎ ಸೇರಿದಂತೆ ಸಿಕ್ಕಿರುವ ದಾಖಲೆಯ ತನಿಖೆ ಪ್ರಾರಂಭವಾದರೆ ತನಿಖೆ ಆರಂಭವೆಂದು ಅರ್ಥ. ದಿನನಿತ್ಯ ಮಾಸ್ಕ್‌ದಾರಿ ಬರುತ್ತಾನೆ. ವಾಪಾಸ್ ಹೋಗುತ್ತಾನೆ. ಯಾರದ್ದೋ ಮಾತನ್ನು ಕೇಳಿ ಆತ ಬರುತ್ತಾನೆ ಎನ್ನುವ ಮಾತು ಕೂಡ ಇದೆ. ಈ ನಡುವೆ ಜಿಲ್ಲಾ ಮಾಜಿಸ್ಟ್ರೇಟ್ ಹಾಜರಿರುತ್ತಾರೆ. ಆತನನ್ನು ಬಂಧನ ಮಾಡಲು ಆಗುವುದಿಲ್ಲ. ಸದ್ಯ ಗಂಭೀರವಾದ ತನಿಖೆ ಆಗುತ್ತಿದೆ. ಪಾರದರ್ಶಕವಾಗಿ ಯಾರ ಒತ್ತಡಕ್ಕೂ ಮಣಿಯದೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಎಷ್ಟು ಕಡೆ ಅಗೆಯುತ್ತೀರಿ ಎನ್ನುವ ಪ್ರಶ್ನೆ ಇದೆ. ನಾವು ತನಿಖೆಯ ಎಲ್ಲಾ ಅಧಿಕಾರವನ್ನು ಎಸ್ ಐಟಿಗೆ ಕೊಟ್ಟಿದ್ದೇವೆ. ಸರ್ಕಾರ ಇದರ ಮಧ್ಯಸ್ಥಿಕೆ ವಹಿಸುವುದಿಲ್ಲ. ಮುಂದೆ ಉತ್ಪನನ ಸ್ಥಗಿತ ಮಾಡುವುದಾಗಿ ಎಸ್‌ಐಟಿ ನಿರ್ಧಾರ ತೆಗೆದುಕೊಂಡಿದೆ. ಸಿಕ್ಕಿರುವ ದಾಖಲೆಯ ವಿಚಾರಣೆ ನಡೆಯಬೇಕಿದೆ ಎಂದರು.
ಮಾಸ್ಕ್‌ದಾರಿ ಬರುತ್ತಾನೆ. ವಾಪಾಸ್ ಹೋಗುತ್ತಾನೆ. ಯಾರದ್ದೋ ಮಾತನ್ನು ಕೇಳಿ ಆತ ಬರುತ್ತಾನೆ ಎನ್ನುವ ಮಾತು ಕೂಡ ಇದೆ. ಈ ನಡುವೆ ಜಿಲ್ಲಾ ಮಾಜಿಸ್ಟ್ರೇಟ್ ಹಾಜರಿರುತ್ತಾರೆ. ಆತನನ್ನು ಬಂಧನ ಮಾಡಲು ಆಗುವುದಿಲ್ಲ. ಸದ್ಯ ಗಂಭೀರವಾದ ತನಿಖೆ ಆಗುತ್ತಿದೆ. ಪಾರದರ್ಶಕವಾಗಿ ಯಾರ ಒತ್ತಡಕ್ಕೂ ಮಣಿಯದೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಎಷ್ಟು ಕಡೆ ಅಗೆಯುತ್ತೀರಿ ಎನ್ನುವ ಪ್ರಶ್ನೆ ಇದೆ. ನಾವು ತನಿಖೆಯ ಎಲ್ಲಾ ಅಧಿಕಾರವನ್ನು ಎಸ್‌ಐಟಿಗೆ ಕೊಟ್ಟಿದ್ದೇವೆ. ಸರ್ಕಾರ ಇದರ ಮಧ್ಯಸ್ಥಿಕೆ ವಹಿಸುವುದಿಲ್ಲ. ಕೆಮಿಕಲ್, ಡಿಎನ್ಎ ಅನಾಲಿಸಿಸಿಸ್, ಎಫ್.ಎಸ್.ಎಲ್ ನಿಂದ ವರದಿ ಬರುವ ತನಕ ತನಿಖೆಯನ್ನು ತಾತ್ಕಾಲಿಕ ಸ್ಥಗಿಕಗೊಳಿಸಲು ಎಸ್‌ಐಟಿ ನಿರ್ಧಾರ ತೆಗೆದುಕೊಂಡಿದೆ. ಎಫ್.ಎಸ್.ಎಲ್ ನಿಂದ ವರದಿ ಬಂದ ಬಳಿಕ ತನಿಖೆ ಮುಂದೂವರಿಯಲಿದೆ ಎಂದು ತಿಳಿಸಿದರು.
ಈ ತನಿಖೆಯಿಂದ ಸತ್ಯಾಂಶ ಹೊರಬರಬೇಕು. ಒಂದು ವೇಳೆ ಅಲ್ಲಿ ಏನೂ ಇಲ್ಲ ಎಂದಾದರೆ ಧರ್ಮಸ್ಥಳದ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ಆಗಿದೆ ಎಂದಾದರೆ ಸಂತ್ರಸ್ಥರಿಗೆ ನ್ಯಾಯ ಸಿಗುತ್ತದೆ. ಇದರ ಮಧ್ಯೆ ರಾಜಕೀಯ ತರುವುದು ಬೇಡ. ಸತ್ಯಾಂಶ ಬರುವ ಮೊದಲೇ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಮಧ್ಯಂತರ ವರದಿ ಬಂದಿಲ್ಲ. ಈ ಮಧ್ಯೆ ನಾವು ತನಿಖೆ ಬೇಡವೆಂದು ಹೇಳಲಾಗುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಈ ತನಿಖೆ ಪಕ್ಷಾತೀತವಾಗಿ ನಡೆಯಬೇಕು ಎನ್ನುವ ಉದ್ದೇಶ ಬಿಟ್ಟರೆ ಬೇರೆನೂ ಇಲ್ಲವೆಂದು ಗೃಹ ಸಚಿವರು ಅಧಿವೇಶನದಲ್ಲಿ ಹೇಳಿದ್ದಾರೆ.