ಕಾಶಿಪಟ್ಣ: ಆ.18ರಂದು ಗ್ರಾಮ ಪಂಚಾಯಿತಿಯ ಕಾಶಿಪಟ್ಣ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮ ಎಂದು ಘೋಷಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಲಾಯಿತು. ಉಪಾಧ್ಯಕ್ಷೆ ಶುಭವಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಪಂಚಾಯತ್ ಸದಸ್ಯರು ವಿ.ಡಬ್ಲ್ಯೂ.ಎಸ್.ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆ ಹಾಗೂ ಹರ್ ಘರ್ ಜಲ್ ಬಗ್ಗೆ ಮಾಹಿತಿಯನ್ನು ISA ಯ ಶಿವರಾಮ್ ಪಿ.ಬಿ. ಮಾಹಿತಿ ನೀಡಿದರು. ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿ ಲಿಖಿತ ಸಹಕರಿಸಿದರು.
ಹರ್ ಘರ್ ಜಲ್ ಗ್ರಾಮವಾಗಿ ಕಾಶಿಪಟ್ಣ
