Site icon Suddi Belthangady

ಕಕ್ಯಪದವು: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಐಪಿಒ ತಂತ್ರಗಳ ಬಗ್ಗೆ ಪ್ರಾಯೋಗಿಕ ಅಧಿವೇಶನ” ಕುರಿತು ಮಾಹಿತಿ ಕಾರ್ಯಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜಿನ ಬಿ.ಕಾಂ. ವಿಭಾಗದ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆಯ ಹಣಕಾಸಿನ ನಿರ್ವಹಣೆ ಹಾಗೂ ಹೂಡಿಕೆಯ ನಿರ್ಧಾರಗಳ ಅರಿವು ಮೂಡಿಸುವ ನಿಟ್ಟಿನಲ್ಲಿ “ಐಪಿಒ ತಂತ್ರಗಳ ಬಗ್ಗೆ ಪ್ರಾಯೋಗಿಕ ಅಧಿವೇಶನ” ಕಾರ್ಯಗಾರವು ಆ.14ರಂದು ನಡೆಯಿತು.

ಈ ಕಾರ್ಯಗಾರದಲ್ಲಿ (ಐಪಿಒ) ಹೊಸ ಕಂಪೆನಿಯಿಂದ ಮೊದಲ ಬಾರಿಗೆ ಷೇರುಗಳನ್ನು ಹೇಗೆ ಖರೀದಿಸಬಹುದು ಮತ್ತು ಷೇರುಗಳನ್ನು ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಈ ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಯಶವಂತ ಜಿ. ನಾಯಕ್ ಮಾಹಿತಿ ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Exit mobile version