ಉಜಿರೆ: ಶ್ರೀ ಸದಾಶಿವ ಬಾಲ ಗೋಕುಲ ಕೇಂದ್ರ ಕಿರಿಯಾಡಿ ಮತ್ತು ಶ್ರೀ ಚಾಮುಂಡೇಶ್ವರಿ ಬಾಲಗೋಕುಲ ಕೇಂದ್ರ ಚಾಮುಂಡಿ ಬೆಟ್ಟ ಓಡಲ, ಇವುಗಳ ಜಂಟಿ ಆಶ್ರಯದಲ್ಲಿ, ಕಿರಿಯಾಡಿ ದೇವಸ್ಥಾನದ ವಠಾರದಲ್ಲಿ ಪಾಲಕರ ಹಾಗೂ ಊರವರ ನೇತೃತ್ವದಲ್ಲಿ ಶ್ರೀ ಬಾಲ ಗೋಕಲಾಷ್ಟಮಿ ಕಾರ್ಯಕ್ರಮ ಜರುಗಿತು.
ನಿವೃತ್ತ ಶಿಕ್ಷಣ ಸಂಯೋಜನಾಧಿಕಾರಿ ಬಾಬಾ ಉಜಿರೆ ದೀಪ ಪ್ರಜ್ವಲನೆ ಮೂಲಕ ಪ್ರಾರಂಭಗೊಂಡು, ನಿವೃತ್ತ ಸೈನ್ಯಧಿಕಾರಿ, ಪಾಲಕ ಜಯರಾಮ್ ಶೆಟ್ಟಿ ಕೆಂಬರ್ಜೆ ಸೂರಪ್ಪ ಗೌಡ ಕಿರಿಯಾಡಿ, ಅವರ ನೇತೃತ್ವದಲ್ಲಿ ಕೃಷ್ಣ ರಾಧೆ ವೇಷಗಳೊಂದಿಗೆ ಊರವರು ಜೊತೆಗೂಡಿ ಶಂಖ, ತಾಳ, ಜಾಗಟೆ ಕೃಷ್ಣನ ಘೋಷಣೆಗಳೊಂದಿಗೆ ಮೆರವಣಿಗೆ ಜರುಗಿತು. 35 ಕೃಷ್ಣ ರಾಧೆ ವೇಷದಾರಿಗಳಿಂದ ವಿವಿಧ ನೃತ್ಯಗಳು, ಹಾಡು ಭಜನೆ ಕೃಷ್ಣನ ಘೋಷಣೆ ನಡೆಯಿತು. ಉಜಿರೆ ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ ದೇವಪ್ಪ ಗೌಡ ಶುಭ ಹಾರೈಸಿದರು.
ತಾಲೂಕು ಗ್ರಾಮ ಸಮಿತಿ ಟೋಲಿ ಸದಸ್ಯೆ ಭವ್ಯ ಮಾತಾಜಿ ಬಾಲ ಗೋಕುಲ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಶಿಕ್ಷಣದ ಬಗ್ಗೆ ತಿಳಿಸಿದರು. ರಾಧಾಕೃಷ್ಣ ವೇಷದಾರಿಗಳೊಂದಿಗೆ ಮಾತೆಯರು, ಪಾಲಕರು, ಮಾತಾಜಿಯವರು ಹಾಗೂ ಊರವರು ಪಾಲ್ಗೊಂಡರು. ಉಜಿರೆ ಶಾರದಾ ಶೋರೂಮ್ ಮಾಲಕರು, ಉಜಿರೆ ಜೈನ ತರಕಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ ಸಿಹಿ ತಿಂಡಿ ವಿತರಿಸಿದರು. ಪ್ರತಿ ಮನೆಯಿಂದ ಮಕ್ಕಳ ಜೊತೆ ಮಾತೆಯರು ಮುಷ್ಟಿ ಅವಲಕ್ಕಿ ಪ್ರಸಾದವನ್ನು ಕೃಷ್ಣದೇವರಿಗೆ ಸಮರ್ಪಿಸಿದರು. ಶಿಕ್ಷಕಿ ಸೇವಂತಿ ನಿರಂಜನ್ ನಿರೂಪಿಸಿ, ರಾಜೇಶ್ವರಿ ಮಾತಾಜಿ ಸ್ವಾಗತಿಸಿ ವಂದಿಸಿದರು.